

ಬೆಂಗಳೂರು: ಬೆಂಗಳೂರಿನಲ್ಲಿ ಶೇಖಾವತ್ ಸಂಪ್ರದಾಯದ ಮೊಟ್ಟ ಮೊದಲ ರೆಸ್ಟೋರೆಂಟ್ ‘ಕೇಸರಿಯಾ’ದಲ್ಲಿ ರಾಜಸ್ಥಾನಿ ಬೊಂಬೆಯಾಟದ ಅಪರೂಪ ಕಲೆಗಳ ‘ರಂಗಿಲೋ ರಾಜಸ್ಥಾನ್’ ಉತ್ಸವ ಆರಂಭವಾಗಿದ್ದು, ಭಾನುವಾರ (ಆ. 25)ದವರೆಗೆ ನಡೆಯಲಿದೆ.
ಇಂದಿರಾನಗರದ ಕೇಸರಿಯಾ ರೆಸ್ಟೋರೆಂಟ್‌ನಲ್ಲಿ ಮಧ್ಯಾಹ್ನ 12 ರಿಂದ 3.30 ರವರೆಗೆ ಮತ್ತು ಸಂಜೆ 7 ರಿಂದ ರಾತ್ರಿ 10 ರವರೆಗೆ ಬೊಂಬೆಯಾದ ಪ್ರದರ್ಶನ ನಡೆಯಲಿದೆ. ಇದರಲ್ಲಿ ಜಾನಪದ ಹಾಡುಗಳೊಂದಿಗೆ ರಾಜಸ್ಥಾನದ ಸಾಂಪ್ರದಾಯಿಕ ‘ಕಟ್ಪತ್ಲಿ’ ಬೊಂಬೆಯಾಟ ಪ್ರದರ್ಶನ ಕಾಣಲಿದೆ. ಈ ಮೂಲಕ ರಾಜಸ್ಥಾನದ ಶ್ರೀಮಂತ ಕಲಾ ಪರಂಪರೆ ಅನಾವರಣಗೊಳ್ಳಲಿದೆ.
ಬೊಂಬೆ ಪ್ರದರ್ಶನದ ಜೊತೆಗೆ, ಕೇಸರಿಯಾ ರೆಸ್ಟೋರೆಂಟ್ನಲ್ಲಿ ಸಾಂಪ್ರದಾಯಿಕ ಭಕ್ಷ್ಯಗಳು ಮತ್ತು ಸಿಹಿತಿಂಡಿಗಳನ್ನು ಒಳಗೊಂಡ ವಿಶೇಷ ಆಹಾರ ಸಿದ್ಧಪಡಿಸಲಾಗಿದೆ. ಅತಿಥಿಗಳಿಗಾಗಿ ವಿವಿಧ ಬಗೆಯ ಮಸಾಲಾ ಚಹಾಗಳು, ಗುಲಾಬ್ ಶರ್ಬತ್ ಮತ್ತು ಪುದಿನಾ ನೀಂಬು ಪಾನಿಯಂತಹ ಆಹ್ಲಾದಕಾರಿ ಪಾನೀಯಗಳು ಲಭ್ಯವಿರಲಿದೆ. ರಬ್ಡಿಯೊಂದಿಗೆ ಜಿಲೇಬಿ, ರಸಮಲೈ ಸ್ಯಾಂಡ್ ವಿಚ್ ಮತ್ತು ಮಲೈ ಘೇವಾರ್ ನಂತಹ ಸಿಹಿ ತಿಂಡಿಗಳಿವೆ. ರುಚಿಕರವಾದ ಆಯ್ಕೆಗಳಲ್ಲಿ ಆಲೂ ಮಟರ್ ಸಮೋಸಾ, ಬಾಜ್ರೆ ಕಿ ಟಿಕ್ಕಿ ಮತ್ತು ಕಲ್ಮಿ ವಡಾ ಸೇರಿವೆ. ಸಾದಾ ಬಾಟಿಯೊಂದಿಗೆ ದಾಲ್ ಪಂಚಮೆಲ್, ಮಟರ್ ಪನೀರ್ ಬಾಟಿ ಹಾಗೂ ರುಚಿಕರ ಕರಿಗಳಾದ ಪನೀರ್ ಲಾಲ್ ಮಿರ್ಚ್ ಮತ್ತು ಪಂಚಮೆಲೆ ಕಾ ಸಾಗ್ ಸವಿಯಬಹುದು. ಕೇಸರಿಯಾ ಕುಲ್ಫಿ ಮತ್ತು ಚುಕಂದರ್ ಹಲ್ವಾದಂತಹ ಸಿಹಿತಿಂಡಿಗಳನ್ನು ಸವಿಯುವ ಅವಕಾಶ ತಪ್ಪಿಸಿಕೊಳ್ಳದಿರಿ.
ವಿಳಾಸ: ಕೇಸರಿಯಾ ರೆಸ್ಟೋರೆಂಟ್, ಗೇಟ್ ನಂ. 315, 1ನೇ ಮಹಡಿ, 100 ಅಡಿ ರಸ್ತೆ, ಅಂಚೆ ಕಚೇರಿ ಎದುರು, ಬಿನ್ನಮಂಗಲ, ಹಂತ 1, ಇಂದಿರಾ ನಗರ, ಬೆಂಗಳೂರು.