ರಂಗನಾಥ್ ದಂಪತಿಗೆ ಸನ್ಮಾನ

Oplus_0
Oplus_0
Published on

ಯಳಂದೂರು : ಪಟ್ಟಣದ ಅಗ್ರಹಾರ ಬೀದಿಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಜ್ಞಾನದೀಪ ಭವನದಲ್ಲಿ ಎಸ್‌ಬಿ ಶಾಖೆಯ ನಿವೃತ್ತ ವ್ಯವಸ್ಥಾಪಕ ರಾಜಯೋಗಿ ಬ್ರಹ್ಮಾಕುಮಾರ ರಂಗನಾಥ ದಂಪತಿಗೆ ಇತ್ತೀಚೆಗೆ ಗೌರವ ಸಮರ್ಪಣೆ ಮಾಡಲಾಯಿತು.

ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಮಹಾಲಕ್ಷ್ಮೀ ಮಾತನಾಡಿ, 1994ರಲ್ಲಿ ಯಳಂದೂರು ಪಟ್ಟಣದ ಬಾಡಿಗೆ ಮನೆಯಲ್ಲಿ ಆರಂಭವಾದ ಓಂ ಶಾಂತಿ ಈಶ್ವರೀಯ ವಿಶ್ವವಿದ್ಯಾಲಯ ಇಂದು ತನ್ನದೇ ಆದ ಸ್ವಂತ ಭವನವನ್ನು ಹೊಂದಿದೆ. ಇಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನತೆಯಲ್ಲಿ ಒತ್ತಡ ಮುಕ್ತ ಜೀವನ ಶೈಲಿಯನ್ನು ಕಲಿಸುವುದರ ಮೂಲಕ ಮಾನವೀಯ ಮೌಲ್ಯಗಳನ್ನು ಜಾಗೃತಿ ಮೂಡಿಸುತ್ತಿದೆ. ಇದಕ್ಕೆ ನೇರ ಕಾರಣಕರ್ತರು ರಂಗನಾಥ್ ದಂಪತಿ ಎಂದರು.

ಕಾರ್ಯಕ್ರಮದಲ್ಲಿ ಹೊನ್ನೂರು ಪ್ರಕಾಶ್, ಬಸವರಾಜ, ರಜತ ರಂಗಸ್ವಾಮಿ, ರಾಕೇಶ, ಶಿವ ಕುಮಾರ, ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net