ರಾಣೆಬೆನ್ನೂರಿನಲ್ಲಿಯೆ ವಿಶ್ವ ವಿದ್ಯಾಲಯದ ಸ್ಥಾಪಿಸಲು ಆಗ್ರಹ

7-RNR-03
Published on

ರಾಣೆಬೆನ್ನೂರ: ಹಾವೇರಿ ಜಿಲ್ಲೆಗೆ ಮಂಜೂರು ಮಾಡಿರುವ ವಿಶ್ವ ವಿದ್ಯಾಲಯವನ್ನು ರಾಣೆಬೆನ್ನೂರಿನಲ್ಲಿಯೆ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ಇಲ್ಲಿಯ ವರ್ತಕರ ಸಂಘ ಸೇರಿ ವಿವಿಧ ಸಂಘಟನೆಗಳ ವತಿಯಿಂದ ಶುಕ್ರವಾರ ನಗರದ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಲಾಯಿತು. ಸರ್ಕಾರ ಇತ್ತೀಚೆಗೆ ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪನೆಗೆ ಮಂಜೂರು ಮಾಡಿದ್ದು ಸ್ವಾಗತಾರ್ಹ. ಆದರೆ, ಹಾವೇರಿ ಜಿಲ್ಲೆಯ ವಿಶ್ವ ವಿದ್ಯಾಲಯವನ್ನು ವಾಣಿಜ್ಯ ನಗರಿ ಹಾಗೂ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಿಸಿಕೊಳ್ಳುವ ರಾಣೆಬೆನ್ನೂರಿನಲ್ಲಿ ಸ್ಥಾಪನೆ ಮಾಡಬೇಕು. ಜಿಲ್ಲಾ ಕೇಂದ್ರದಲ್ಲಿ ಈಗಾಗಲೇ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್, ವೈದ್ಯಕೀಯ ಕಾಲೇಜ್ ಹಾಗೂ ಸ್ನಾತಕೋತ್ತರ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಆದ್ದರಿಂದ ನೂತನ ವಿಶ್ವವಿದ್ಯಾಲಯವನ್ನು ರಾಣೆಬೆನ್ನೂರ ಸುತ್ತಮುತ್ತ ಲಭ್ಯವಿರುವ ಸರ್ಕಾರಿ ಜಾಗದಲ್ಲಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net