

ರಾಣೆಬೆನ್ನೂರ: ಹಿಂದಿನ ಕಾಲದಲ್ಲಿ ಶಿಕ್ಷಕರ ಪರಿಸ್ಥಿತಿ ಬಹಳ ಕಷ್ಟಮಯವಾಗಿತ್ತು. ಆಗ ಶಿಕ್ಷಕರಿಗೆ ಆರ್ಥಿಕ ನೆರವು ಒದಗಿಸುವ ಸದುದ್ದೇಶದಿಂದ ಹುಟ್ಟಿ ಹಾಕಿದ ಸಂಸ್ಥೆ ಶಿಕ್ಷಕರ ಪತ್ತಿನ ಸಹಕಾರ ಸಂಘವಾಗಿದೆ. ಇಂದಿನ ದಿನದಲ್ಲಿ ಶಿಕ್ಷಕರಿಗೆ ಸರ್ಕಾರದಿಂದ ಹಲವಾರು ಸೌಲಭ್ಯಗಳನ್ನು ಕಲ್ಪಿಸಿದ್ದು, ಶಿಕ್ಷಕರು ಅವುಗಳ ಸದ್ಭಳಕೆ ಮಾಡಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್ ಹೇಳಿದರು.
ನಗರದ ಶಿಕ್ಷಕರ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ, ಶಿಕ್ಷಕಿಯರ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಶಿಕ್ಷಕರ ಬೇವರಿನಿಂದ ಶಿಕ್ಷಕರ ಪತ್ತಿನ ಸಹಕಾರ ಸಂಘ ಕಟ್ಟಲಾಗಿದ್ದು, ಇದರ ಬೆಳವಣಿಗೆಯಲ್ಲಿ ಪ್ರತಿಯೊಬ್ಬರ ಶಿಕ್ಷಕರ ಶ್ರಮವಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಆರ್. ಶಂಕರ, ವಾಕರಸಾ ಸಂಸ್ಥೆ ನಿರ್ದೇಶಕ ಸಂತೋಷಕುಮಾರ ಪಾಟೀಲ, ಜೆಡಿಎಸ್ ಮುಖಂಡ ಮಂಜುನಾಥ ಗೌಡಶಿವಣ್ಣವನರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಜು ಅಡಿವೆಪ್ಪನವರ, ಬಿಇಒ ಎಂ.ಎಚ್. ಪಾಟೀಲ ಮಾತನಾಡಿದರು.
ಸಂಘದ ಅಧ್ಯಕ್ಷ ರಮೇಶ ಯಳೇಹೂಳಿ ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಸಮನ್ವಯಾಧಿಕಾರಿ ಮಂಜನಾಯ್ಕ ಎಲ್., ತಾಪಂ ಸಹಾಯಕ ನಿರ್ದೇಶಕ ಲಿಂಗರಾಜ ಸುತ್ತಕೋಟಿ, ದೈಹಿಕ ಶಿಕ್ಷಣಾಧಿಕಾರಿ ಹನುಮಂತಪ್ಪ ಬಿ.ಎಚ್., ಪತ್ತಿನ ಸಂಘದ ಉಪಾಧ್ಯಕ್ಷ ನಾಗರಾಜ ಬಿಳಸನೂರಮಠ, ಡಾ. ಶಶಿಕುಮಾರ ಮೆಹರವಾಡೆ, ಬಿ.ಪಿ. ಶಿಡೇನೂರ, ಅನ್ನಪೂರ್ಣ ಕಟಗಿ, ಎಂ.ಡಿ. ದ್ಯಾಮಣ್ಣನವರ, ಆರ್.ಡಿ. ಹೊಂಬರಡಿ, ಸಾವಕ್ಕ ಮಲ್ಲನಗೌಡ್ರ, ಅಶೋಕ ಲೆಕ್ಕಪ್ಪಳವರ, ಎಸ್.ಡಿ. ಕರಿಯಣ್ಣನವರ, ಎಂ.ಎ. ತಾಸೆವಾಲೆ, ಎಸ್.ವಿ. ದೊಡ್ಮನಿ, ಎಸ್.ಜಿ. ಮಾಕಾಳ, ಬಿ.ಜಿ. ಬಡಿಗೇರ ಮತ್ತಿತರರು ಉಪಸ್ಥಿತರಿದ್ದರು.