

ರಾಣೆಬೆನ್ನೂರ: ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆಯಾಗಬೇಕಿದ್ದ ರಾಜ್ಯದಲ್ಲಿಯೆ ವಿಶೇಷವಾಗಿ ಗಮನ ಸೆಳೆದಿದ್ದ ಎಪಿಎಂಸಿ ಮೇಗಾ ಮಾರುಕಟ್ಟೆಯನ್ನು ತರಾತುರಿಯಲ್ಲಿ ಶಾಸಕ ಅರುಣಕುಮಾರ ಪೂಜಾರ ಹಾಗೂ ವಿರುಪಾಕ್ಷಪ್ಪ ಬಳ್ಳಾರಿ ಉದ್ಘಾಟಿಸಿದ ಘಟನೆ ಬುಧವಾರ ಜರುಗಿತು.
ಇಂದು ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಎಪಿಎಂಸಿ ಮೇಗಾ ಮಾರುಕಟ್ಟೆ ಉದ್ಘಾಟನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಕೇಂದ್ರ ಚುನಾವಣೆ ಆಯೋಗ ಚುನಾವಣೆ ಘೋಷಣೆ ಕುರಿತು ಸುದ್ದಿಗೋಷ್ಠಿ ಕರೆದ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಕಾರಣದಿಂದ ಮುಖ್ಯಮಂತ್ರಿಯವರ ಪ್ರವಾಸ ರದ್ದಾಯಿತು. ಇದರಿಂದಾಗಿ ಶಾಸಕರೇ ತರಾತುರಿಯಲ್ಲಿ ಉದ್ಘಾಟಿಸಬೇಕಾಯಿತು.
ಸಾರ್ವಜನಿಕರಿಗಾಗಿ ಸಿದ್ಧಪಡಿಸಿದ 8 ಕ್ವಿಂಟಲ್ ತೂಕದ ಪಲಾವನ್ನು ಅನಾಥ ಆಶ್ರಮ, ಆಂಜನೇಯ ಬಡಾವಣೆಯ ಗುಡಿಸಲು ನಿವಾಸಿಗಳಿಗೆ ಕಳುಹಿಸಲಾಯಿತು. ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸಿಎಂ ಕಾರ್ಯಕ್ರಮಕ್ಕೆ ಹಾಕಿದ್ದ ಪೆಂಡಾಲ್‌ಅನ್ನು ತೆರವುಗೊಳಿಸಲಾಯಿತು.