ಅಭಿಮಾನಿಗಳಿಂದ ಉಪಹಾರ, ತಂಪುಪಾನೀಯ ವಿತರಿಸಿ ಪುನೀತ್ ಜನ್ಮದಿನಾಚರಣೆ

17-RNR-04
Published on

ರಾಣೆಬೆನ್ನೂರ: ಕರ್ನಾಟಕ ರತ್ನ ದಿ. ಪುನೀತ್ ರಾಜಕುಮಾರ ಅವರ ಜನ್ಮದಿನವನ್ನು ನಗರದಲ್ಲಿ ಅವರ ಅಭಿಮಾನಿಗಳು ಶುಕ್ರವಾರ ಸಂಭ್ರಮದಿಂದ ಆಚರಿಸಿದರು.
ಇಲ್ಲಿನ ತಾಪಂ ಮುಂಭಾಗದಲ್ಲಿ ಮಜ್ಜಿಗೆ, ಲಸ್ಸಿ ವಿತರಣೆ ಮಾಡುವ ಮದನಸಿಂಗ್ ರಜಪೂತ ಎಂಬುವರ ಪುನೀತ್ ಜನ್ಮದಿನದ ಆಚರಿಸಿದರು. ನಗರದ ರೈಲ್ವೆ ಸ್ಟೇಷನ್ ಬಳಿ ಡಾ. ರಾಜಕುಮಾರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಪಲಾವ್ ವಿತರಣೆ ಮಾಡಿದರು.
ನಾಗರಾಜ ಹಾರೋಗೊಪ್ಪ, ಉಮೇಶ ಕುಂದಾಪುರ, ಚನ್ನಪ್ಪ ಹಳ್ಳಿ, ನಾಗಪ್ಪ ಗುಗ್ಗರಿ, ಮಾಲತೇಶ ಕೆರೂಡಿ, ಪ್ರವೀಣ ಗುಗ್ಗರಿ, ಜಯಪ್ಪ ಗುತ್ತಲ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net