ಲಾರಿ ಡಿಕ್ಕಿ ಹೊಡೆಸಿ ವ್ಯಕ್ತಿ ಗಾಯಗೊಳ್ಳುವಂತೆ ಮಾಡಿದ ಅಪರಾಧಿಗೆ ಜೈಲು ಶಿಕ್ಷೆ

Published on

ರಾಣೆಬೆನ್ನೂರ: ಲಾರಿ ಡಿಕ್ಕಿ ಹೊಡೆಸಿ ಪಾದಕ್ಕೆ ಗಾಯವಾಗುವಂತೆ ಮಾಡಿದ ಅಪರಾಧಿಗೆ 6 ತಿಂಗಳು ಜೈಲು ಶಿಕ್ಷೆ ಹಾಗೂ 1500 ರೂ. ದಂಡ ವಿಧಿಸಿ ಇಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಬಿ. ಸಿದ್ಧರಾಜು ಮಂಗಳವಾರ ತೀರ್ಪು ನೀಡಿ ಆದೇಶಿಸಿದ್ದಾರೆ.
ತಾಲೂಕಿನ ಕೋಟಿಹಾಳ ಗ್ರಾಮದ ಆನಂದ ಲಕ್ಷ್ಮಪ್ಪ ಹಾರೋಗೊಪ್ಪ ಶಿಕ್ಷೆಗೆ ಗುರಿಯಾದ ಅಪರಾಧಿ.
ಈತ 2021 ಜನೇವರಿ 21ರಂದು ತಾನು ಚಲಾಯಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಕುಪ್ಪೇಲೂರ-ಲಿಂಗದಹಳ್ಳಿ ರಸ್ತೆಯಲ್ಲಿ ಪಾದಚಾರಿ ಬಸವಪ್ಪ ಲಕ್ಷೆಟ್ಟಿ ಎಂಬುವರ ಪಾದದ ಮೇಲೆ ಹರಿಸಿ ಗಾಯವಾಗುವಂತೆ ಮಾಡಿದ್ದ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಾಕ್ಷಾೃಧಾರಗಳ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಧುಮತಿ ಸಿದ್ನೂರಕರ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net