ಬಿಜೆಪಿಗರಿಂದ ಭರ್ಜರಿ ರೋಡ್ ಶೋ

19-RNR-01
Published on

ರಾಣೆಬೆನ್ನೂರ: ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಯ ರೋಡ್ ಶೋ ನಗರದಲ್ಲಿ ಭಾನುವಾರ ಭರ್ಜರಿಯಾಗಿ ನಡೆಯಿತು.
ನಗರದ ಕೆಇಬಿ ವಿನಾಯಕ ದೇವಸ್ಥಾನದಿಂದ ಆರಂಭವಾದ ರೋಡ್ ಶೋ ಬಸ್ ನಿಲ್ದಾಣ ವೃತ್ತ, ಸ್ಟೇಷನ್ ರಸ್ತೆ, ಅಂಚೆ ಕಚೇರಿ ವೃತ್ತ, ಎಂ.ಜಿ. ರಸ್ತೆ ಮೂಲಕ ಕುರುಬಗೇರಿ ಕ್ರಾಸ್‌ಗೆ ಬಂದು ತಲುಪಿತು. ದಾರಿಯುದ್ದಕ್ಕೂ ಕಾರ್ಯಕರ್ತರು ಪಕ್ಷದ ಬಾವುಟ ಹಾರಿಸುತ್ತಾ, ನೃತ್ಯ ಮಾಡುತ್ತಾ ಪಕ್ಷದ ಪರ ಘೋಷಣೆ ಕೂಗಿದರು. ಹೆಜ್ಜೆ ಕುಣಿತ, ಗೊಂಬೆ ಕುಣಿತ ಮೆರವಣಿಗೆಯಲ್ಲಿ ಗಮನ ಸೆಳೆದವು.
ಸಂಸದ ಶಿವಕುಮಾರ ಉದಾಸಿ, ಕೃಷಿ ಸಚಿವ ಬಿ.ಸಿ. ಪಾಟೀಲ, ಶಾಸಕ ಅರುಣಕುಮಾರ ಪೂಜಾರ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಜಿಲ್ಲಾ ಉಸ್ತುವಾರಿ ಕಲ್ಲೇಶ, ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಅಂಗಡಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರೂಪಾ ಬಾಕಳೆ, ಶಹರ ಘಟಕದ ಅಧ್ಯಕ್ಷ ದೀಪಕ ಹರಪನಹಳ್ಳಿ, ಬಸವರಾಜ ಕೇಲಗಾರ, ಮಂಜುನಾಥ ಓಲೇಕಾರ, ಡಾ. ಬಸವರಾಜ ಕೇಲಗಾರ, ಭಾರತಿ ಅಳವಂಡಿ, ಪವನಕುಮಾರ ಮಲ್ಲಾಡದ, ಭಾರತಿ ಜಂಬಗಿ, ಚೋಳಪ್ಪ ಕಸವಾಳ, ಪ್ರಭಾವತಿ ತಿಳವಳ್ಳಿ, ಬಸವರಾಜ ಹುಲ್ಲತ್ತಿ, ಅನಿಲ ಸಿದ್ದಾಳಿ, ಗದಿಗೆಪ್ಪ ಹೊಟ್ಟಿಗೌಡ್ರ, ಪ್ರಕಾಶ ಪೂಜಾರ, ನಾಗರಾಜ ಪವಾರ, ಮೈಲಪ್ಪ ಗೋಣಿಬಸಮ್ಮನವರ, ಮಂಜುಳಾ ಹತ್ತಿ, ಶಿವಕುಮಾರ ನರಸಗೊಂಡರ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net