ಸಿಡಿ ಕೇಸ್​ನಲ್ಲಿ ಡಿಕೆಶಿ ಕೈವಾಡ! ಅಣ್ಣನ ಕುರಿತು ಡಿ.ಕೆ.ಸುರೇಶ್​ ಹೇಳಿದ್ದೇನು?

DKshi-suresh
Published on

ಆನೇಕಲ್: ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೆಸರು ಆರಂಭದಿಂದಲೂ ಪ್ರಸ್ತಾಪ ಆಗುತ್ತಿದೆ.

ಅಲ್ಲದೆ ಸಿಡಿ ಕೇಸ್​ನ ಮಹಾನಾಯಕ/ ಸೂತ್ರಧಾರ ಡಿಕೆಶಿ ಎಂಬ ನೇರ ಆರೋಪ ದಟ್ಟವಾಗಿದೆ. ಈ ಕುರಿತು ಡಿಕೆಶಿ ಸಹೋದರ ಡಿ.ಕೆ.ಸುರೇಶ್​ ಮಾತನಾಡಿದ್ದಾರೆ.

ಆನೇಕಲ್ ತಾಲೂಕಿನ ಖಾಸಗಿ ಹೋಟೆಲ್​ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್​, ಸಂತ್ರಸ್ತ ಮಹಿಳೆ‌ ಸೋಷಿಯಲ್ ಮೀಡಿಯಾದಲ್ಲಿ ತನ್ನ ನೋವನ್ನು ಹೇಳಿದ್ದಾರೆ. ಇದುವರೆಗೂ ಸರ್ಕಾರ ಸಂತ್ರಸ್ತೆ ವಿಚಾರವಾಗಿ ರಕ್ಷಣೆ ಹಾಗೂ ಸಹಾನುಭೂತಿ ವಿಷಯವಾಗಿ ಮಾತಾಡಿಲ್ಲ. ಸಂತ್ರಸ್ತೆಯ ಪರವಾಗಿ ವಿರೋಧ ಪಕ್ಷದ ನಾಯಕರು ಸದನದಲ್ಲಿ ದ್ವನಿಯೆತ್ತಿದ್ದಾರೆ. ವಿರೋಧ ಪಕ್ಷದ ನಾಯಕರು ತನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಆಶಯ ಆ ಮಹಿಳೆಯದ್ದು ಎಂದರು. ಇದನ್ನೂ ಓದಿರಿ ಇಂದು ಸಂಜೆ ಫಿಲಂ ರಿಲೀಸ್​ ಮಾಡ್ತಾರಂತೆ ಜಾರಕಿಹೊಳಿ! ಅದು ಯಾರ ಸಿನಿಮಾ?

ಸರ್ಕಾರವನ್ನೇ ಬೀಳಿಸತ್ತೇನೆ ಎಂದು ರಮೇಶ್​ ಜಾರಕಿಹೊಳಿ ಎಚ್ಚರಿಸಿರುವ ವಿಷಯ ಬಿಜೆಪಿ ಮತ್ತು ಅವರ ಶಾಸಕರಿಗೆ ಸಂಬಂಧಿಸಿದ್ದು ಎಂದ ಡಿಕೆ ಸುರೇಶ್​, ಸಂತ್ರಸ್ತ ಮಹಿಳೆ ನೀಡಿರುವ ದೂರಿನ‌ ಮೇಲೆ ನ್ಯಾಯ ಸಮ್ಮತ ಕ್ರಮ ತೆಗೆದುಕೊಳ್ಳಬೇಕಾದ್ದು ಸರ್ಕಾರದ ಕರ್ತವ್ಯ. ಆ ಮೂಲಕ ಮಹಿಳೆಯರ ಪರ ಸರ್ಕಾರ ಇದೆ ಎಂಬುದನ್ನು ತೋರಿಸಬೇಕಿದೆ ಎಂದರು.

ಸಿಡಿ ಬಿಡುಗಡೆ ಮಾಡಿಸಿದ್ದೇ ಡಿಕೆಶಿ ಎಂಬ ಆರೋಪವನ್ನ ಅಲ್ಲಗೆಳೆದ ಸುರೇಶ್​, ರಾಜಕೀಯ ವೈರಿಗಳ‌ ಮೇಲೆಯೇ ಆರೋಪ ಮಾಡಬೇಕು. ಸರ್ಕಾರದ ವೈಫಲ್ಯ- ದುರಾಡಳಿತಗಳನ್ನು ಎತ್ತಿ ಹಿಡಿಯಬೇಕಿರೋದು ನಮ್ಮ ಕರ್ತವ್ಯ. ಬಿಜೆಪಿ ದುರಾಡಳಿತ ನಡೆಸುತ್ತಿದ್ದು, ಮಹಿಳೆ ಪರ ನಾವು ಹೋರಾಟ ಮಾಡೋದು ಸರಿ ಎನ್ನಿಸಿದೆ ಎಂದು ಸುರೇಶ್​ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net