ಆಪ್ತರ ಪರವಾಗಿ ಸಚಿವ ಜಾರಕಿಹೊಳಿ ಬ್ಯಾಟಿಂಗ್ ?

Ramesh Jarakiholi
Published on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳುವುದಾಗಿ ಹೇಳಿದ ಬಳಿಕ ಶಾಸಕರು ಸಚಿವ ಪದವಿಗೆ ಬೇಡಿಕೆಯಿಟ್ಟರೆ, ಉಪ ಮುಖ್ಯಮಂತ್ರಿ ಹುದ್ದೆಗೆ ಬಡ್ತಿ ಪಡೆಯುವ ಧಾವಂತದಲ್ಲಿ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಇದ್ದಂತಿದೆ. ಸಿಎಂ ಅಧಿಕೃತ ನಿವಾಸ ’ ಕಾವೇರಿ’ಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಂಗಳವಾರ 15 ನಿಮಿಷಗಳಿಗೂ ಹೆಚ್ಚು ಕಾಲ ರ್ಚಚಿಸಿರುವುದು ಪುಷ್ಟಿ ನೀಡಿದೆ.

ಡಿಸಿಎಂ ಆಗಲೇಬೇಕೆಂದು ದೆಹಲಿ ಮಟ್ಟದಲ್ಲಿ ಲಾಬಿ ನಡೆಸಿದ್ದಲ್ಲದೆ, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಮೂಲಕವೂ ಹೇಳಿಸಿಯಾಗಿದೆ. ಮತ್ತೊಮ್ಮೆ ಬಿಎಸ್ ವೈ ಮುಂದೆ ಈ ಬೇಡಿಕೆಯಿಡಲು ಭೇಟಿಯಾಗಿದ್ದರು. ಅಲ್ಲದೆ, ಆಪ್ತರಾದ ಎಚ್.ವಿಶ್ವನಾಥ್, ಸಿ ಪಿ.ಯೋಗೇಶ್ವರ ಪರವಾಗಿ ವಕಾಲತ್ತು ನಡೆಸಿದ್ದು, ಕೊಟ್ಟ ಮಾತು ಉಳಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತಾಪಗೌಡರಿಗೆ ಒತ್ತಾಸೆ: ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಈ ಕ್ಷೇತ್ರದ ಉಪ ಚುನಾವಣೆಯ ಹಾದಿ ಸುಗಮವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಾಪ ಗೌಡ ಪಾಟೀಲ್​ರಿಗೆ ಪಕ್ಷದ ಟಿಕೆಟ್ ಖಾತರಿಪಡಿಸಿಕೊಳ್ಳುವಂತೆ ವಿನಂತಿಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net