ಸಿಡಿ ಲೇಡಿ ಕಿಡ್ನ್ಯಾಪ್ ಪ್ರಕರಣ: ಕೇಸ್ ಬೆಳಗಾವಿಯಿಂದ ಬೆಂಗಳೂರಿಗೆ ಶಿಫ್ಟ್ !

CD case
Published on

ಬೆಂಗಳೂರು; ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಅಶ್ಲೀಲ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಯುವತಿ ಅಪಹರಣ ಆಗಿದ್ದಾಳೆ ಎಂದು ಆಕೆಯ ಪಾಲಕರು ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಮೊನ್ನೆ ಅಪಹರಣ ದೂರು ದಾಖಲಿಸಿದ್ದರು. ಈ ಕುರಿತು ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು ಪ್ರಕರಣವನ್ನು ಬೆಂಗಳೂರಿನ ಆರ್​ಟಿ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

ಪ್ರಕರಣದ ಪ್ರಾಥಮಿಕ ವರದಿ ಕೋರ್ಟ್‌ಗೆ ಸಲ್ಲಿಸಿದ ಬಳಿಕ ಕೇಸ್ ಫೈಲ್ ಆರ್​ಟಿ ನಗರ ಪೊಲೀಸ್ ಠಾಣೆಗೆ ಹಾಗೂ ಒಂದು ಪ್ರತಿಯನ್ನು ಡಿಜಿ ಐಜಿಪಿಗೆ ರವಾನೆ ಮಾಡಿದ್ದಾರೆ ಎಪಿಎಂಸಿ ಪೊಲೀಸರು.

ಮಗಳು ಕಿಡ್ನಾಪ್ ಆಗಿದ್ದಾಳೆಂದು ಸಿಡಿಯಲ್ಲಿದ್ದ ಯುವತಿ ತಂದೆ ಬೆಳಗಾವಿಯ ಎಪಿಎಂಸಿ ಠಾಣೆಗೆ ದೂರು ನೀಡಿದ್ದರು. ಬೆಂಗಳೂರಿನ ಪಿ.ಜಿ.ಯಿಂದ ಕಿಡ್ನಾಪ್ ಆಗಿದ್ದಾಳೆಂದು ದೂರು ನೀಡಿದ್ರು. ಆರ್.ಟಿ.ನಗರ ಠಾಣಾ ವ್ಯಾಪ್ತಿಯ ಪಿಜಿಯಿಂದ ಕಿಡ್ನಾಪ್ ಆಗಿದ್ದಾಳೆಂದು ದೂರು ನೀಡಲಾಗಿತ್ತು.

ಈ ವೇಳೆ ಯುವತಿಯ ಪೋಷಕರು ಜೀವಭಯ ಹಿನ್ನೆಲೆ ಬೆಂಗಳೂರಿಗೆ ತೆರಳದೇ ಬೆಳಗಾವಿಯಲ್ಲಿ ದೂರು ನೀಡ್ತಿದ್ದೀವಿ ಎಂದಿದ್ದರು. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿ ಪ್ರಾಥಮಿಕ ತನಿಖೆ ಮಾಡಿ ಕೇಸ್ ವರ್ಗಾವಣೆ ಮಾಡಿದ್ದಾರೆ ಬೆಳಗಾವಿ ಪೊಲೀಸರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net