ರಮೇಶ್​ ಜಾರಕಿಹೊಳಿ ಸೆಕ್ಸ್​ ಸಿಡಿ ಪ್ರಕರಣ: ಚಡ್ಡಿ ಪ್ರದರ್ಶಿಸಿ ಪ್ರತಿಭಟನೆ

protest ramesh jarakiholi
Published on

ಬೆಳಗಾವಿ: ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ. ಸರ್ಕಾರಕ್ಕೆ ಮಾನ-ಮರ್ಯಾದೆ ಇದ್ದರೆ ಜಾರಕಿಹೊಳಿಯಿಂದ ಈ ಕೂಡಲೇ ರಾಜೀನಾಮೆ ಪಡೆಯಬೇಕು ಎಂದ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಅಲ್ಲದೆ ರಾಜ್ಯದ ಹಲವೆಡೆ ವಿಪಕ್ಷಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕುತ್ತಿವೆ.

ರಮೇಶ್ ಜಾರಕಿಹೊಳಿಯ ಸ್ವಕ್ಷೇತ್ರ ಗೋಕಾಕದಲ್ಲಿ ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ ನೇತೃತ್ವದಲ್ಲಿ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆದಿದೆ. ಹೋರಾಟಗಾರ ಪ್ರಕಾಶ ಬಾಗೋಜಿ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಚಡ್ಡಿ ಅವರು ಚಡ್ಡಿ ಪ್ರದರ್ಶನ ಮಾಡುತ್ತ ಜಾರಕಿಹೊಳಿಯ ನೈತಿಕತೆ ಬಗ್ಗೆ ಲೇವಡಿ ಮಾಡಿದ್ದಾರೆ. ಇದನ್ನೂ ಓದಿರಿ ಜಾರಕಿಹೊಳಿ ಸೆಕ್ಸ್​ ವಿಡಿಯೋ ರಿಲೀಸ್​ ಬೆನ್ನಲ್ಲೇ ದೂರುದಾರನ ಬೆನ್ನುಬಿದ್ದ ಬೆದರಿಕೆ ಕರೆಗಳು!

ಜಾರಕಿಹೊಳಿ ರಾಜೀನಾಮೆ ನೀಡದಿದ್ದರೆ ಮಾ.9ರಂದು ಗೋಕಾಕ್​ ಅನ್ನು ಬಂದ್​ ಮಾಡುತ್ತೇವೆ ಎಂದು ಅಶೋಕ್​ ಪೂಜಾರಿ ಎಚ್ಚರಿಸಿದ್ದಾರೆ.

ದಾವಣಗೆರೆಯಲ್ಲೂ ಜಿಲ್ಲಾ ಯುವ ಕಾಂಗ್ರೆಸ್‌ನಿಂದ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಪ್ರತಿಭಟನೆ ನಡೆದಿದೆ. ಚಡ್ಡಿ- ಬನಿಯನ್ ತೋರಿಸಿತ್ತ ಸಚಿವರನ್ನು ಅಣಕಿಸಿ ಆಕ್ರೋಶ ಹೊರಹಾಕಿದ್ದಾರೆ. ರಮೇಶ್ ಜಾರಕಿಹೊಳಿಯನ್ನ ಸಚಿವ ಸಂಪುಟದಿಂದ ಕೈಬಿಡುವಂತೆ ಸಿಎಂ ಬಿಎಸ್‌ವೈಗೆ ಒತ್ತಾಯಿಸಿದ್ದಾರೆ.

ಹುಬ್ಬಳ್ಳಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜೆಡಿಎಸ್, ಶಿವಸೇನಾ ಕರ್ನಾಟಕ ಸೇರಿದಂತೆ ವಿವಿಧ ಸಂಘಟನೆಯ ಕಾರ್ಯಕರ್ತರು ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಘೊಷಣೆ ಕೂಗಿತ್ತ ಸಚಿವ ಸ್ಥಾನಕ್ಕೆ ರಾಕೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಈ ಪ್ರಕರಣ ಕುರಿತು ಬೆಂಗಳೂರಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ನಾವು ರಾಜಕಾರಣಿಗಳು ಅಂತ ಹೇಳಿಕೊಳ್ಳೋಕೆ ಅಸಹ್ಯವಾಗ್ತಿದೆ. ಮಕ್ಕಳು, ಫ್ಯಾಮಿಲಿ ಹೇಗೆ ನೋಡ್ತಾರೆ ಅನ್ನೋದು ವ್ಯಥೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net