ಬೆಳಕು ಮತ್ತು ಕತ್ತಲೆಯ ರಾಂಬೋ ಸರ್ಕಸ್; ಬೆಂಗಳೂರಿನಲ್ಲಿ ಪ್ರಥಮ ಪ್ರದರ್ಶನ

circus
Published on

ಬೆಂಗಳೂರು: ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ರ‌್ಯಾಂಬೋ ಸರ್ಕಸ್ ಕಲಾವಿದರು ಎಲ್‌ಇಡಿ ಮತ್ತು ಗ್ಲೋ ಎಂಟರ್ಟೈನ್ಮೆಂಟ್ ಮೂಲಕ, ಸರ್ಕಸ್ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಕತ್ತಲೆ ಲೋಕದಲ್ಲಿ ಹೊರ ಹೊಮ್ಮುವ ಬೆಳಕಿನ ಕಿರಣಗಳ ಜೊತೆಗೆ ಕಲಾವಿದರು ನಾನಾ ಸಾಹಸ ಪ್ರದರ್ಶಿಸಲಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಇಂತಹ ಪ್ರಯತ್ನವೊಂದಕ್ಕೆ ಬೆಂಗಳೂರು ಸಾಕ್ಷಿಯಾಗಲಿದೆ. ಸರ್ಕಸ್‌ನ ವಿವಿಧ ಕಸರತ್ತುಗಳು, ನಾನಾ ಭಂಗಿಯ ಪ್ರದರ್ಶನಗಳು ವರ್ಣರಂಜಿತವಾಗಿ ಮೂಡಿ ಬರಲಿವೆ. ಹೂಪ್ ಡ್ಯಾನ್ಸರ್‌ಗಳು, ಜಗ್ಲರ್‌ಗಳು, ಸ್ಟಿಲ್ಟ್ ವಾಕರ್ಸ್ ಮತ್ತು ಫ್ರೋ ಆರ್ಟಿಸ್ಟ್ಗಳು ಬೆಳಕಿನೊಂದಿಗೆ ಆಡುವ ಆಟ ಸರ್ಕಸ್ ಪ್ರಿಯರನ್ನು ಹೊಸ ಲೋಕಕ್ಕೆ ಕರೆದೊಯ್ಯಲಿದೆ. ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಎದುರುಗಡೆ ಇರುವ ಸೆಂಟ್ ಜಾನ್ಸ್ ಆಡಿಟೋರಿಯಂನಲ್ಲಿ ಡಿ.26 (ಇಂದು) ರಿಂದ ಜ.05 ರವರೆಗೆ ಪ್ರದರ್ಶನ ನಡೆಯಲಿದೆ.

ಎಲ್‌ಇಡಿ ಮತ್ತು ಗ್ಲೋ ಪ್ರದರ್ಶನ

ಅತ್ಯಾಧುನಿಕ ಎಲ್‌ಇಡಿ ಬಲ್ಬ್ ಮತ್ತು ವಿಶೇಷ ಗ್ಲೋ ಪ್ರದರ್ಶನಗಳನ್ನು ಲೇಸರ್ ತಂತ್ರಜ್ಞಾನ ಮತ್ತು ಸಾಹಸ ಪ್ರದರ್ಶನದ ಸಂಯೋಜನೆಯೊಂದಿಗೆ ಕೌಶಲಪೂರ್ಣ ಚಲನೆಯ ಕೊರಿಯೋಗ್ರಫಿಯ ಜತೆ ಕಲಾವಿದರು ಪ್ರೇಕ್ಷಕರು ಮುಂದಿಡಲಿದ್ದಾರೆ. ಪೈರೋಟೆಕ್ನಿಕ್ ರೋಬೋಟ್‌ಗಳು ಮತ್ತು ಗ್ಲೋ ಡ್ಯಾನ್ಸರ್‌ಗಳು, ಎಲ್‌ಇಡಿ ಹೂಲಾ-ಹೂಪ್‌ಗಳು, ಎಲ್‌ಇಡಿ ಪೊಯ್, ಜಗ್ಲಿಂಗ್ ಬಾಲ್‌ಗಳು, ವಿಪ್‌ಗಳು, ಫೈಬರ್ ಆಪ್ಟಿಕ್ ಡ್ರೆಸ್‌ಗಳು ಹೀಗೆ ಈ ಪ್ರದರ್ಶನ ಎಲ್ಲಾ ರೀತಿಯಲ್ಲಿ ವಿಶಿಷ್ಟವಾಗಿರಲಿವೆ. ಇದಕ್ಕೆ ಪೂರಕವಾಗಿ ವೇದಿಕೆಯನ್ನು ವಿಶಿಷ್ಟವಾಗಿ ಸಜ್ಜುಗೊಳಿಸಲಾಗಿದ್ದು, ನೋಡುಗರಿಗೆ ವಿಶಿಷ್ಟ ಅನುಭವ ನೀಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net