ಮಹಾಕಾವ್ಯಗಳಲ್ಲಿರುವ ಮೌಲ್ಯಗಳನ್ನು ಅಳವಡಿಸಿಕೊಳ್ಳಿ

IMG-20240724-WA0121
Published on

ಅರಸೀಕೆರೆ: ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ರಾಮಾಯಣ, ಮಹಾಭಾರತ ಹಾಗೂ ಭಾಗವತ ಕನ್ನಡ ಸಾರಸ್ವತ ಲೋಕದ ಅನರ್ಘ್ಯ ರತ್ನಗಳು ಎಂದು ಕರ್ನಾಟಕ ಗಮಕ ಕಲಾ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್ ಉಡುಪ ಹೇಳಿದರು.


ಕರ್ನಾಟಕ ಗಮಕ ಕಲಾ ಪರಿಷತ್ತು, ಅರಸೀಕೆರೆ ತಾಲೂಕು ಘಟಕ, ಸಂಸ್ಕಾರ ಭಾರತಿ, ಜಿಲ್ಲಾ ಸಮಿತಿ ಹಾಗೂ ಬಸವೇಶ್ವರ ಪ್ರೌಢಶಾಲೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಪಠ್ಯಾಧಾರಿತ ಗಮಕ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಾಕಾವ್ಯಗಳಲ್ಲಿ ಅಡಕವಾಗಿರುವ ಮೌಲ್ಯಯುತ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದಲ್ಲಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂದು ತಿಳಿಸಿದರು.


ಹತ್ತನೇ ತರಗತಿ ಕನ್ನಡ ಪಠ್ಯದಲ್ಲಿರುವ ಮಹಾಕವಿ ಕುಮಾರವ್ಯಾಸ ವಿರಚಿತ ಕರ್ನಾಟಕ ಭಾರತ ಕಥಾಮಂಜರಿಯಿಂದ ಆಯ್ದ ಕೌರವೇಂದ್ರನ ಕೊಂದೆ ನೀನು ಹಾಗೂ ಪಂಪ ಮಹಾಕವಿ ವಿರಚಿತ ವಿಕ್ರಮಾರ್ಜುನ ವಿಜಯದಿಂದ ಆಯ್ದ ಕೆಮ್ಮನೆ ಮೀಸೆವೊತ್ತೆನೇ ಭಾಗಗಳ ಪದ್ಯಗಳನ್ನು ಅನೇಕ ರಾಗಗಳಿಂದ ಹಾಡುವುದರ ಜತೆಗೆ ಚಿತ್ರಗೀತೆಗಳನ್ನು ಹಾಡಿ ಗಮನಸೆಳೆದರು. ಕನ್ನಡ ಶಿಕ್ಷಕಿ ಭಾರತಿ ವ್ಯಾಖ್ಯಾನ ನೀಡಿದರು. ಮುಖ್ಯ ಶಿಕ್ಷಕ ಸುರೇಶ್, ಧರ್ಮಾಬಾಯಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net