ನಿವೃತ್ತ ಎಇಇ ರಾಮಶೆಟ್ಟಿ ಮಂಗಲಗಿ ನಿಧನ

IMG-20241207-WA0038
Published on

ದಂತ ವೈದ್ಯ ಡಾ.ಆನಂದ ಮಂಗಲಗಿಗೆ ಪಿತೃ ವಿಯೋಗ

ಕಲಬುರಗಿ: ನಗರದ ಮಹಾವೀರ ನಗರದ ನಿವಾಸಿಗಳಾಗಿದ್ದ ಲೋಕೋಪಯೋಗಿ ಇಲಾಖೆಯ ನಿವೃತ್ತ ಎಇಇ ರಾಮಶೆಟ್ಟಿ ಮಂಗಲಗಿ (೮೦) ಶನಿವಾರ ನಿಧನ ಹೊಂದಿದರು. ಪತ್ನಿ, ಪುತ್ರ ಖ್ಯಾತ ದಂತ ವೈದ್ಯ ಡಾ.ಆನಂದ ಮಂಗಲಗಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕಲಬುರಗಿಯ ಮಹಾವೀರ ನಗರದ ಸ್ವಗೃಹದಲ್ಲಿ ಭಾನುವಾರ ಬೆಳಗ್ಗೆ ೮-೩೦ ಗಂಟೆಯವರೆಗೂ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರ ಇರಿಸಲಾಗುವುದು. ನಂತರ ಸೇಡಂಗೆ ತೆಗೆದುಕೊಂಡು ಹೋಗಿ ಸಾರ್ವಜನಿಕ ದರ್ಶನ ಬಳಿಕ ಸ್ವಂತ ಜಮೀನಿನಲ್ಲಿ ಭಾನುವಾರ ಮಧ್ಯಾಹ್ನ ೨ ಕ್ಕೆ ಅಂತ್ಯಕ್ರಿಯೆ ನಡೆಯಲಿದೆ. ಶೋಕ : ರಾಮಶೆಟ್ಟಿ ಮಂಗಲಗಿ ಅವರ ನಿಧನಕ್ಕೆ ಮೋಹನರಾಜ ಚಾರಿಟೇಬಲ್ ಆಸ್ಪತ್ರೆಯ ಮುಖ್ಯಸ್ಥ ಡಾ.ದೇವಾನಂದ ಬಿರಾದಾರ, ಡಾ.ನಿವೇದಿತಾ ಬಿರಾದಾರ, ಡಾ.ವಿಠ್ಠಲ್ ಪೂಜಾರಿ,ಡಾ.ರೋಹಿತ ಪಾಟೀಲ್, ಸಹಾಯಕ ನಿರ್ದೇಶಕ ಸುನೀಲ್ ಎಲ್.ತಟ್ಟೆಪಳ್ಳಿ, ಪತ್ರಕರ್ತರಾದ ಶರಣಯ್ಯ ಹಿರೇಮಠ,ಹಣಮಂತರಾವ ಭೈರಾಮಡಗಿ,ಅರುಣಕುಮಾರ ಕದಂ ಇತರರು ಶೋಕ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net