ಡಾಂಬರು ಕಾಣದ ರಾಮಾನುಪಡಿ ರಸ್ತೆ

Published on

ಸಂಚಾರಕ್ಕೆ ತೊಂದರೆ | ಅಧಿಕಾರಿಗಳು, ಜನಪ್ರತಿನಿಧಿಗಳಿಂದ ರ್ನಿಲಕ್ಷ$್ಯ

ಜೆ.ಕೆ.ಆನಂದ್​ ಚೇಳೂರು

ಚೇಳೂರು ಹೋಬಳಿ ಊದವಾರಪಲ್ಲಿ ಕ್ರಾಸ್​ನಿಂದ ರಾಮಾನುಪಡಿ ಗ್ರಾಮದ ವರೆಗೆ ಬಾಗೇಪಲ್ಲಿ, ಚೇಳೂರು, ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದೆಗಟ್ಟಿದ್ದು, ಗುಣಿಗಳು ಬಿದ್ದು ವಾಹನ ಸವಾರರಿಗೆ ತೊಂದರೆಯಾಗಿದೆ.

ಚೇಳೂರು ಮಾರ್ಗವಾಗಿ ಬಾಗೇಪಲ್ಲಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು ಸ್ವಾತಂತ್ರ$್ಯ ಬಂದಾಗಿನಿಂದಲೂ ಡಾಂಬರೀಕರಣ ಮಾಡಿಲ್ಲ. ಹಲವು ಗ್ರಾಮಗಳ ವಿದ್ಯಾರ್ಥಿಗಳು ಚೇಳೂರು, ಚಿಂತಾಮಣಿ, ಬಾಗೇಪಲ್ಲಿಗೆ ವಿದ್ಯಾಭ್ಯಾಸಕ್ಕೆ ಇದೇ ರಸ್ತೆಯಲ್ಲಿ ತೆರಳಬೇಕಿದೆ. ಆದರೆ, ರಸ್ತೆ ಅಧ್ವಾನಗೊಂಡಿರುವ ಕಾರಣ ಸಮಯಕ್ಕೆ ಸರಿಯಾಗಿ ಶಾಲಾ& ಕಾಲೇಜುಗಳಿಗೆ ಹೋಗಲು ಆಗುತ್ತಿಲ್ಲ. ಇನ್ನೊಂದು ಕಡೆ ರೈತರು ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಸಂಪೂರ್ಣವಾಗಿ ಹದೆಗಟ್ಟಿದ್ದು ದೊಡ್ಡ ಗುಣಿಗಳೇ ನಿಮಾರ್ಣವಾಗಿದ್ದು, ಆಗಾಗ್ಗೆ ಅಪಘಾತ ಸಂಭವಿಸಿ ಹಲವರು ಆಸ್ಪತ್ರೆಗಳಿಗೆ ದಾಖಲಾಗಿರುವುದು ಉಂಟು. ಗ್ರಾಮಸ್ಥರು ಅನೇಕ ಸಲ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರೂ ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ. ಇದೇ ರಸ್ತೆಯಲ್ಲಿ ಜನಪ್ರತಿನಿಧಿಗಳು ಸಂಚರಿಸುತ್ತಾರಾದರು ಇತ್ತ ಗಮನ ಹರಿಸುತ್ತಿಲ್ಲ. ಪಟ್ಟಣಕ್ಕೆ, ಬೇರೆ ಸ್ಥಳಕ್ಕೆ ವಿವಿಧ ಕೆಲಸಗಳಿಗೆ ಹೋಗುವ ಗ್ರಾಮಸ್ಥರು ನಿಗದಿತ ಸಮಯಕ್ಕೆ ತಲುಪದಂತಾಗಿದೆ. ಈ ರಸ್ತೆಯಲ್ಲಿ ಬಸ್​ ಸಂಚರಿಸುವುದಿಲ್ಲ. ರಸ್ತೆ ಸರಿಯಿಲ್ಲವೆಂದು ಆಟೋ ಚಾಲಕರು ದುಬಾರಿ ಬಾಡಿಗೆ ಪಡೆಯುತ್ತಾರೆ.

ಊದವಾರಪಲ್ಲಿ ಕ್ರಾಸ್​ -ರಾಮಾನುಪಡಿ ಜಿಪಂ ರಸ್ತೆ ಪಿಡಬ್ಲುಡಿ ಇಲಾಖೆಯ ರಸ್ತೆಯಾಗಿದ್ದು, ರಸ್ತೆ ಹಾಳಾಗಿರುವ ಬಗ್ಗೆ ಗ್ರಾಮಸ್ಥರು ಗಮನಕ್ಕೆ ತಂದಿದ್ದಾರೆ. ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ರಸ್ತೆ ಸರಿಪಡಿಸಲು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಈಗ ಗುಣಿ ಮುಚ್ಚಿ, ಮುಂದಿನ ದಿನಗಳಲ್ಲಿ ರಸ್ತೆಯನ್ನು ಸಂಪೂರ್ಣ ಸರಿಪಡಿಸಲಾಗುವುದು.

| ಅರುಣಾಚಲ ಪಿಡಬ್ಲುಡಿ ಎಇಇ ಬಾಗೇಪಲ್ಲಿ

ಊದವಾರಪಲ್ಲಿ ಕ್ರಾಸ್​ನಿಂದ ರಾಮಾನುಪಡಿ ರಸ್ತೆ ದುರಸ್ತಿ ಬಗ್ಗೆ ಎಷ್ಟೇ ಬಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ತಿಳಿಸಿದರೂ ಪ್ರಯೋಜನೆವಾಗಿಲ್ಲ.

|  ಜೆ.ಶಂಕರಪ್ಪ

ಊದವಾರಪಲ್ಲಿ ನಿವಾಸಿ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಕೂಡಲೇ ಅಭಿವೃದ್ಧಿ ಮಾಡಿಸಲಿ.

|  ರಾಮಚಂದ್ರ, ರಾಮಾನುಪಡಿ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net