ಕಣ್ವ ಸಂಪರ್ಕ ರಸ್ತೆ ಕುಸಿತ

8235c4d2-03aa-4b8f-bc58-0c0818493d77
Published on

ರಾಮನಗರ: ಕೆಂಗಲ್ ಬಳಿಯಿಂದ ಕಣ್ವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ರಸ್ತೆ ಕನ್ನ ಮಂಗಲ ಗ್ರಾಮದ ಬಳಿ ಕುಸಿದಿದೆ.

ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದಿಂದಾಗಿ ಶಿಥಿಲಗೊಂಡಿದ್ದ ರಸ್ತೆ ಗುರುವಾರ ಮಧ್ಯಾಹ್ನದ ವೇಳೆ ಕೆಎಂಎಫ್‌ನ ಕಾರ್ಖಾನೆ ಬಳಿ ಕುಸಿದಿದ್ದು. ಇದರಿಂದಾಗಿ ಈ ಭಾಗದ ಸಂಪರ್ಕ ಕಡಿತಗೊಂಡಿದೆ.

ಕಣ್ವ ಜಲಾಶಯ, ಎಲೆ ಹೊಸಳ್ಳಿ, ದಶವಾರ ಸೇರಿದಂತೆ ಪ್ರಮುಖ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಇದೀಗ ಸಂಪರ್ಕ ಕಷ್ಟವಾಗಿದೆ.

ಕಣ್ವ ಜಲಾಶಯದಲ್ಲಿ ನೀರಿನ ಪ್ರಮಾಣ ತಗ್ಗಿರುವ ಕಾರಣದಿಂದ ಎಲೆ ಹೊಸಳ್ಳಿ ಗ್ರಾಮಕ್ಕೆ ರಾಮನಗರ, ಇಲ್ಲವೇ ಅರ್ಚಕರಹಳ್ಳಿ ಬಳಿಯ ಅಡ್ಡ ರಸ್ತೆಗಳ ಮೂಲಕ ಬಲಸಿಕೊಂಡು ಬಂದು ಸಂಪರ್ಕ ಸಾಧಿಸಬಹುದಾಗಿದೆ. ಒಂದು ವೇಳೆ ಮಳೆ ಹೆಚ್ಚಾಗಿ ಜಲಾಶಯದಿಂದ ಹೆಚ್ಚಿನ ನೀರನ್ನು ಹರಿ ಬಿಟ್ಟರೆ ಎಲೆ ಹೊಸಳ್ಳಿ ಗ್ರಾಮದ ಸಂಪರ್ಕ ಕಷ್ಟವಾಗಲಿದೆ.

ಬದಲಿ ಮಾರ್ಗ ಬಳಸಿ: ಕಣ್ವ ಜಲಾಶಯಕ್ಕೆ ಹೋಗುವ ಪ್ರವಾಸಿಗರು ಕೆಂಗಲ್ ಪಕ್ಕದ ರಸ್ತೆಯ ಬದಲಿಗೆ, ಚನ್ನಪಟ್ಟಣ ದಶವಾರ ಮಾರ್ಗವಾಗಿ ಕಣ್ವ ಜಲಾಶಯಕ್ಕೆ, ಇಲ್ಲವೇ ರಾಮನಗರದ ಶ್ಯಾನಬೋಗನಹಳ್ಳಿ ಬಳಿಯಿಂದ ಕ್ಯಾಸಪುರ ಮಾರ್ಗವಾಗಿ ಕಣ್ವಕ್ಕೆ ತಲುಪಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net