ರಾಮನಗರದಲ್ಲಿ ಪ್ರಮುಖ ರೈಲುಗಳ ನಿಲುಗಡೆಗೆ ಒತ್ತಾಯ

22-09-rama-Rail
Published on

ರಾಮನಗರ

ನಗರದಲ್ಲಿ ಪ್ರಮುಖ ರೈಲುಗಳನ್ನು ನಿಲುಗಡೆ ಮಾಡುವಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವೆ ದರ್ಶನಾ ಜಾದೋರ್ಶ್​ ಅವರಿಗೆ ಬಿಜೆಪಿ ಮುಖಂಡರು ಮನವಿ ಮಾಡಿದರು.

ರಾಮನಗರಕ್ಕೆ ಆಗಮಿಸಿದ್ದ ಸಚಿವೆಗೆ ಮನವಿ ಸಲ್ಲಿಸಿದ ಮುಖಂಡರು, ಮೈಸೂರು&ವಾರಣಾಸಿ, ಮೈಲಾಡುತುರೈ & ಮೈಸೂರು, ಬೆಂಗಳೂರು&ಮೈಸೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್​ಪ್ರೆಸ್​, ಮೈಸೂರು&ಶಿರಡಿ ಎಕ್ಸ್​ಪ್ರೆಸ್​ ರೈಲುಗಳಿಗೆ ನಿಲುಗಡೆ ಇಲ್ಲ. ಈ ರೈಲುಗಳಲ್ಲಿ ಪ್ರಯಾಣಿಸಲು ಅನಿವಾರ್ಯವಾಗಿ ಮಂಡ್ಯ, ಇಲ್ಲವೇ ಬೆಂಗಳೂರಿಗೆ ಹೋಗಬೇಕು. ನಿಲುಗಡೆ ಮಾಡಿದರೆ ಪ್ರತಿದಿನ ಸಂಚರಿಸುವ ಪ್ರಯಾಣಿಕರ ಜತೆಗೆ ಈ ಸ್ಥಳಗಳಿಗೆ ತೆರಳುವ ಪ್ರವಾಸಿಗಳಿಗೂ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು. ಮುಖಂಡರಾದ ರುದ್ರದೇವರು, ಮಂಜು, ಪದ್ಮನಾಭ್​, ಎಸ್​.ಆರ್​.ನಾಗರಾಜು, ನಾಗೇಶ್​ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net