ಎರೇಹಳ್ಳಿ ಮಂಜು ಬಿಡಿಸಿಸಿ ಬ್ಯಾಂಕ್ ಹಂಗಾಮಿ ಅಧ್ಯಕ್ಷ

3fc7f635-96e6-481a-9e60-b3e55a4bf45e
Published on

ರಾಮನಗರ: ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲು ಒಳಗೊಂಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ (ಬಿಡಿಸಿಸಿ) ಹಂಗಾಮಿ ಅಧ್ಯಕ್ಷರಾಗಿ ಹಾಲಿ ಉಪಾಧ್ಯಕ್ಷ ಎರೇಹಳ್ಳಿ ಮಂಜು ಅಧಿಕಾರ ಸ್ವೀಕಾರ ಮಾಡಿದರು.

ಅ ಹಾಲಿ ಅಧ್ಯಕ್ಷ ಹನುಮಂತಯ್ಯ ತಮ್ಮ ಸ್ಥಾನಕ್ಕೆ ಜುಲೈ 12ರಂದು ರಾಜೀನಾಮೆಯನ್ನು ಸಲ್ಲಿಸಿದ್ದರು. ಇವರ ರಾಜೀನಾಮೆ ಜುಲೈ 26ರಂದು ಅಂಗೀಕಾರವಾಗಿತ್ತು. ಇದಾದ ನಂತರ ಚುನಾವಣಾ ಪ್ರಕ್ರಿಯೆಗಳು ನಡೆದು ಹೊಸ ಅಧ್ಯಕ್ಷರ ಆಯ್ಕೆಗೆ ಒಂದು ತಿಂಗಳ ಅವಧಿ ತೆಗೆದುಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಹಂಗಾಮಿ ಅಧ್ಯಕ್ಷರಾಗಿ ರಾಮನಗರದವರೇ ಆದ ಬಿಡಿಸಿಸಿ ಬ್ಯಾಂಕ್ ನ ಹಾಲಿ ಉಪಾಧ್ಯಕ್ಷ ಎರೇಹಳ್ಳಿ ಮಂಜು ಗುರುವಾರ ಅಧಿಕಾರ ಸ್ವೀಕಾರ ಮಾಡಿದರು.

ಹಂಗಾಮಿ ಅಧ್ಯಕ್ಷರನ್ನು ನಿರ್ಗಮಿತ ಅಧ್ಯಕ್ಷ ಹನುಮಂತಯ್ಯ ಸೇರಿದಂತೆ ಇತರೆ ನಿರ್ದೇಶಕರು, ಬ್ಯಾಂಕ್ ನ ಸಿಬ್ಬಂದಿ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net