ನಕಲಿ ದಾಖಲೆಗೆ ದೃಢೀಕರಣ ಉಪ ತಹಶೀಲ್ದಾರ್ ವಿರುದ್ಧ ಪ್ರಕರಣ ದಾಖಲು

Complaint 21 nov 2019
Published on


ರಾಮನಗರ: ಜಮೀನೊಂದರ ನಕಲಿ ದಾಖಲೆಗಳಿಗೆ ದೃಢೀಕರಣದ ನೀಡಿದ ಆರೋಪದ ಮೇಲೆ ಹೊಸಕೋಟೆ ತಾಲೂಕಿನ ನಂದಗುಡಿ ನಾಡಕಚೇರಿ ಉಪ ತಹಶೀಲ್ದಾರ್ ವಿನಯ್ ಕಪೂರ್ ವಿರುದ್ಧ ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮನಗರ ತಾಲೂಕು ಬಸವನಪುರ ಸರ್ವೇ ನಂ.35/3ಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಈ ಸಂಬಂಧ ಅರ್ಜಿದಾರರು ಸಲ್ಲಿಸಿದ್ದ ದಾಖಲೆಗಳ ನೈಜತೆಯನ್ನು ಪರಿಶೀಲಿಸಿ ಸ್ಪಷ್ಟೀಕರಣ ನೀಡುವಂತೆ ಕೋರಿದ್ದರು.

ಈ ಹಿನ್ನೆಲೆಯಲ್ಲಿ ರಾಮನಗರ ತಾಲೂಕು ಕಚೇರಿಯಲ್ಲಿ ಕಡತ ವಿಭಾಗದಲ್ಲಿ ಪರಿಶೀಲನೆ ಮಾಡಲಾಗಿ, ಈ ಜಮೀನಿಗೆ ಯಾವುದೇ ಮಂಜೂರಾತಿ ದೊರೆತಿರುವುದು ಕಂಡು ಬಂದಿಲ್ಲ.
ಅಲ್ಲದೆ, 2014-15ರಲ್ಲೇ ಈ ಜಮೀನಿಗೆ ಕೈ ಬರಹದ ಪಹಣಿಯಲ್ಲಿ ಅಕ್ರಮವಾಗಿ ಹೆಸರು ನೋಂದಾಯಿಸಲಾಗಿದ್ದು, ನಂತರ ನಡೆದಿರುವ ಎಲ್ಲಾ ಪರಬಾರೆ/ಖಾತೆ ಬದಲಾವಣೆಗಳನ್ನು ಅಸಹಿಂದುಗೊಳಿಸಿ, ಸರ್ಕಾರದ ವಶಕ್ಕೆ ಪಡೆಯುವಂತೆ ರಾಮನಗರ ಉವಿಭಾಗಾಧಿಕಾರಿ ಆದೇಶ ನೀಡಿದ್ದರು.


ಇದಾದ ನಂತರವೂ 2020ರ ಮೇ.26ರಿಂದ 2021ರ ಏಪ್ರಿಲ್ 20ರವರೆಗೆ ರಾಮನಗರ ತಹಶೀಲ್ದಾರ್ ಕಚೇರಿಯ ಅಭಿಲೇಖಾಲಯದ ಪ್ರಭಾರವನ್ನು ಹೊಂದಿದ್ದ ವಿನಯ್ ಕಪೂರ್ ನಕಲೀ ದಾಖಲೆಗಳನ್ನು ದೃಢೀಕರಿಸಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಕಚೇರಿಯ ಅಧಿಕಾರಿ ಶಂಕರ್ ಎನ್ನುವುದು ರಾಮನಗರ ಐಜೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net