

ರಾಮನಗರ: ಕೈಲಾಂಚ ಹೋಬಳಿಯ ನಾಗೋಹಳ್ಳಿ ಗ್ರಾಮದಲ್ಲಿ ಹಾವು ಕಚ್ಚಿ ಆಶಾ ರಾಣಿ (33) ಎಂಬ ಮಹಿಳೆ ಸಾವನ್ನಪ್ಪಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಮನೆ ಹಿತ್ತಲಿನಲ್ಲಿ ತೋಟದ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ವಿಷದ ಹಾವು ಕಚ್ಚಿದೆ. ಈ ವೇಳೆ ನೋವು ಭಯದಿಂದ ಕಿರುಚಿ ಹಿತ್ತಲಿನಿಂದ ಮನೆ ಮುಂಭಾಗಕ್ಕೆ ಆಶಾರಾಣಿ ಓಡಿ ಬಂದಿದ್ದಾರೆ. ಕೂಡಲೇ ಅಕ್ಕಪಕ್ಕದ ಜನರು ವಾಹನದಲ್ಲಿ ಕೈಲಾಂಚ ಆಸ್ಪತ್ರೆಯತ್ತ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ವೈದ್ಯರು ಸಿಗದ ಹಿನ್ನಲೆಯಲ್ಲಿ ರಾಮನಗರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತರಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಶಾರಾಣಿ ಮೃತಪಟ್ಟಿದ್ದಾರೆ.
ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಇಬ್ಬರು ಮಕ್ಕಳಿದ್ದು ಮಗ 9 ನೇ ತರಗತಿ ಮಗಳು 6 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಪತಿ ಪೈಂಟರ್ ವೃತ್ತಿ ಮಾಡುತ್ತಾರೆ.