ಸೀರಳ್ಳಕ್ಕೆ ತಡೆಗೋಡೆ ನಿರ್ಮಾಣ ಈಡೇರಿತು ಅರ್ಕೇಶ್ವರ ಕಾಲನಿ ಜನರ ಬೇಡಿಕೆ ಮನೆ, ರಸ್ತೆಗೆ ನೀರು ನುಗ್ಗುವುದರಿಂದ ಮುಕ್ತಿ

RMGm-Ph-01-Nagarsabe-Arkeswara Colony-Thadegode-Work-Compleete-Story-Photo-12-2-2023
Published on

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ನಗರದ 21ನೇ ವಾರ್ಡಿನ ಅರ್ಕೇಶ್ವರ ಕಾಲನಿ ಜನರ ಬಹುದಿನಗಳ ಬೇಡಿಕೆಯಾಗಿದ್ದ ಸೀರಳ್ಳಕ್ಕೆ ತಡೆಗೋಡೆ ನಿರ್ವಾಣದ ಕನಸು ನನಸಾಗಿಸುವ ನಿಟ್ಟಿನಲ್ಲಿ ನಗರಸಭೆ ಜನರ ಸಮಸ್ಯೆಗೆ ಸ್ಪಂದಿಸಿದೆ.

ಮಳೆ ಬಂದರೆ ಅರ್ಕೆಶ್ವರ ಕಾಲನಿ ಜನರು ಭಯದ ನೆರಳಲ್ಲಿ ಜೀವನ ಕಟ್ಟಿಕೊಳ್ಳಬೇಕಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಸುರಿದ ಮಳೆಯಿಂದಾಗಿ ಭಕ್ಷಿ ಕೆರೆ ಏರಿ ಒಡೆದು ಉಂಟಾದ ನೆರೆ ಕೂಡ ಇಲ್ಲಿನ ಜನರ ಬದುಕನ್ನೇ ಕಸಿದುಕೊಂಡಿತ್ತು. ಐದು ಬೀದಿಗಳು ಜಲಪ್ರಳಯದಿಂದ ತತ್ತರಿಸಿದ್ದವು. ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿತ್ತು. ರೇಷ್ಮೆ ಉದ್ಯಮಕ್ಕೂ ಹೊಡೆತ ಬಿದ್ದಿತು. 2005ರಲ್ಲೂ ಇದೇ ರೀತಿ ಜನ ಸಂಕಷ್ಟ ಎದುರಿಸಿದ್ದರು.

ಅಂದಿನಿಂದಲೂ ಸ್ಥಳೀಯರು ತಡೆಗೋಡೆ ನಿರ್ವಾಣಕ್ಕೆ ನಗರಸಭೆಗೆ ಮನವಿ ಮಾಡುತ್ತಲೇ ಇದ್ದರು.

54 ಕೋಟಿ ರೂ.ಗಳಿಗೆ ಮನವಿ

ಮೊದಲ ಹಂತವಾಗಿ ನಗರಸಭೆ ನಗರೋತ್ಥಾನ 4ರ ಅನುದಾನದಲ್ಲಿ ಸುವಾರು 1.75 ಕೋಟಿ ರೂ. ವೆಚ್ಚದಲ್ಲಿ ಅರ್ಕೇಶ್ವರ ಕಾಲನಿ ಭಾಗದಲ್ಲಿ 90 ಮೀಟರ್, ಗೌಸಿಯಾನಗರ, ಜಿಯಾವುಲ್ಲಾ ಬ್ಲಾಕ್ ಭಾಗದಲ್ಲಿ 160 ಮೀಟರ್ ತಡೆಗೋಡೆ ನಿರ್ವಾಣ ವಾಡುತ್ತಿದೆ. ನಗರೋತ್ಥಾನ ಅಭಿವೃದ್ಧಿ ಕಾಮಗಾರಿಗೆ ಜಿಯಾವುಲ್ಲಾ ಬ್ಲಾಕ್ ಬಳಿ ಕಳೆದ ತಿಂಗಳು ಚಾಲನೆ ನೀಡಲಾಗಿತ್ತು. ಇನ್ನು ಯಾರಬ್ ನಗರದಿಂದ ಟಿಪ್ಪುನಗರ, ಹೊಸಳ್ಳಿ ಬೈಲುವರೆಗೆ ಸುವಾರು 54 ಕೋಟಿ ರೂ. ವೆಚ್ಚದ 3 ಕಿ.ಮೀ. ತಡೆಗೋಡೆ ನಿರ್ವಾಣಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಮುಖ್ಯಮಂತ್ರಿ ಬಸವರಾಜ ಬೊವ್ಮಾಯಿ, ಕಂದಾಯ ಸಚಿವ ಅಶೋಕ್, ವಾಜಿ ಮುಖ್ಯಮಂತ್ರಿ ಎಚ್.ಡಿ. ಕುವಾರಸ್ವಾಮಿ, ಶಾಸಕಿ ಅನಿತಾಕುವಾರಸ್ವಾಮಿ, ಉಸ್ತುವಾರಿ ಸಚಿವ ಡಾ.ಅಶ್ವತ್ಥನಾರಾಯಣ್, ಸಂಸದ ಡಿ.ಕೆ. ಸುರೇಶ್ ಸೇರಿ ಹಲವರು ಸೀರಹಳ್ಳ ಪ್ರವಾಹದಿಂದ ಉಂಟಾದ ಹಾನಿ ಸಂದರ್ಭದಲ್ಲಿ ಖುದ್ದು ವೀಕ್ಷಣೆ ನಡೆಸಿದ್ದರು. ಸರ್ಕಾರ ಕೂಡ ನೆರೆ ಹಾವಳಿ ವಿಶೇಷ ಅನುದಾನ ಭರವಸೆ ನೀಡಿತ್ತು. ನಗರಸಭೆ ತಡೆಗೋಡೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುವಾರು 64 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದೆ. ಅನುದಾನ ನೀಡಿದರೆ ಉಳಿದ 3 ಕಿ.ಮೀ. ವ್ಯಾಪ್ತಿಯಲ್ಲಿ ನಿರಾತಂಕವಾಗಿ ಕಾಮಗಾರಿ ಸಾಗಲಿದೆ ಎನ್ನುತ್ತದೆ ನಗರಸಭೆ.

2005ರಲ್ಲಿ, ಕಳೆದ ಸೆಪ್ಟೆಂಬರ್‌ನಲ್ಲಿ ಇಲ್ಲಿನ ಜನರು ಸಂಕಷ್ಟ ಎದುರಿಸಿದ್ದರು. ತಡೆಗೋಡೆ ನಿರ್ಮಿಸಿರುವ ಕಾರಣ ಈಗ ನೆಮ್ಮದಿಯ ರಾತ್ರಿ ಕಳೆಯುವಂತೆ ಆಗಿದೆ.

ರಮೇಶ್, ನಗರಸಭೆ ಸದಸ್ಯ, 21ನೇ ವಾರ್ಡ್

ತಡೆಗೋಡೆ ನಿರ್ವಾಣಕ್ಕೆ ಒತ್ತು ನೀಡಲಾಗಿದೆ. ಮೊದಲ ಹಂತದಲ್ಲಿ 90, 160 ಮೀಟರ್ ಕೆಲಸ ಮಾಡಲಾಗುತ್ತಿದೆ. ಹೆಚ್ಚಿನ ಅನುದಾನ ಅಗತ್ಯವಿರುವ ಕಾರಣ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಬಿ.ಕೆ. ಪವಿತ್ರ, ಅಧ್ಯಕ್ಷೆ, ನಗರಸಭೆ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net