

ರಾಮನಗರ: ಬಿಸಿಯೂಟದ ದಿನಸಿಗಳನ್ನೇ ಕಳವು ಮಾಡಿರುವ ಘಟನೆ ನಗರದ ಬಾಲಕರ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.
ನಗರದ ಹಾಜೀ ನಗರದಲ್ಲಿರುವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗವೂ ಕಾರ್ಯನಿರ್ವಹಿಸುತ್ತಿದ್ದು, ಶಿವರಾತ್ರಿ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ರಜೆ ಇದ್ದ ಕಾರಣ, ಬಿಸಿಯೂಟ ಕೊಠಡಿ ಸೇರಿದಂತೆ ಶಾಲೆಯ ಎಲ್ಲಾ ಕೊಠಡಿಗಳಿಗೆ ಬೀಗ ಜಡಿದು ಸಿಬ್ಬಂದಿ ಶುಕ್ರವಾರ ಸಂಜೆ ತೆರಳಿದ್ದರು.
ಮತ್ತೆ ಸೋಮವಾರ ಬಂದು ನೋಡಲಾಗಿ, ಬಿಸಿಯೂಟ ಆಹಾರ ದಾಸ್ತಾನು ಕೊಠಡಿಯ ಬೀಗವನ್ನು ಜಖಂಗೊಳಿಸಿ, ಇಲ್ಲಿಂದ 50 ಕೆಜಿ ತೂಕದ 6 ಅಕ್ಕಿ ಚೀಲ, 50 ಕೆಜಿಯ ತೂಕದ ಒಂದು ಗೋದಿ ಮೂಟೆ, 25 ಕೆಜಿಯ 01 ಚೀಲ ಹಾಲಿನ ಪೌಡರ್ ಪ್ಯಾಕೆಟ್ ಹಾಗೂ ಇತರೆ ಕೊಠಡಿಗಳ ಬೀಗಗಳನ್ನು ಸಹ ಮುರಿದು, ಬೀರುವಿನಲ್ಲಿದ್ದ ಪುಸ್ತಕಗಳು, ಶಾಲಾ ಕಾರಿಡಾರ್ ನಲ್ಲಿ ಅಳವಡಿಸಿದ್ದ ಸಿಸಿಟಿವಿಗಳನ್ನು ಸಹ ಕಳವು ಮಾಡಿದ್ದಾರೆ.
ಈ ಸಂಬಂಧ ಶಾಲೆಯ ಉಪ ಪ್ರಾಂಶುಪಾಲರಾದ ಪ್ರೇಮ ರಾಮನಗರ ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ.