ಉಪಯೋಗಕ್ಕಿಲ್ಲದ ಸಕಾಲ ಕಿಯೋಸ್ಕ್ಸೇವೆಗೆ ಅರ್ಹವಾಗಿದೆಯೇ, ತಾಂತ್ರಿಕ ಸಮಸ್ಯೆಯೇ ತಿಳಿಯುತ್ತಿಲ್ಲ ಜನಸಾಮಾನ್ಯರ ಅಲೆದಾಟ ತಪ್ಪಿಲ್ಲ

Rmgm-Ph-01-Sakala Mechaine Story-AC Office-Ramanagara-7-3-2023
Published on

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ನಗರದ ತಾಲೂಕು ಆಡಳಿತ ಸೌಧದಲ್ಲಿರುವ ಸಕಾಲ ಸೇವಾ ಅರ್ಜಿ ‘ಕಿಯೋಸ್ಕ್’ ಸೇವೆ ಒದಗಿಸುವಲ್ಲಿ ವಿಲವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಸರ್ಕಾರ ಜನಸಾವಾನ್ಯರಿಗೆ ಕಂದಾಯ ಇಲಾಖೆ ಸೌಲಭ್ಯಗಳು ಸುಲಭವಾಗಿ ಸಿಗಬೇಕೆಂಬ ಉದ್ದೇಶದಿಂದ ದಾಖಲೆಗಳು ಡಿಜಿಟಲೀಕರಣಗೊಂಡ ಹಿನ್ನೆಲೆಯಲ್ಲಿ ಜನರು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಸಕಾಲ ಸೇವೆ ಜಾರಿಗೆ ತಂದಿದೆ.

ಸೇವೆಯ ಸೌಲಭ್ಯಕ್ಕಾಗಿ ಅರ್ಜಿ ಹಾಕಲು ಜನರು ದೂರದ ನಾಡ ಕಚೇರಿಗೆ ಹೋಗುವುದನ್ನು ತಪ್ಪಿಸುವ ಸಲುವಾಗಿ ರಾಮನಗರ ಉಪವಿಭಾಗಾಧಿಕಾರಿ ಕಚೇರಿ, ತಾಲೂಕು ಆಡಳಿತ ಸೌಧದ ಮುಖ್ಯದ್ವಾರದ ಬಳಿ ಸಕಾಲದ ಯೋಜನೆಯಲ್ಲಿ ಅರ್ಜಿ ಹಾಕುವ ಯಂತ್ರ ಅಳವಡಿಸಲಾಗಿದೆ. ಕಳೆದ ಐದಾರು ತಿಂಗಳಿಂದ ಯಂತ್ರ ಚಾಲನೆಗೊಂಡಿಲ್ಲ. ಇದ್ದಲ್ಲೇ ಸದ್ದು ಗದ್ದಲವಿಲ್ಲದೆ ನಿಂತಿದೆ. ಅಲ್ಲಿಂದ ಇಲ್ಲಿಯವರೆಗೂ ಯಂತ್ರ ಸರಿಯಾಗಿದೆಯೇ, ಕೆಟ್ಟಿದೆಯೋ ಎಂಬುದು ತಿಳಿಯುತ್ತಿಲ್ಲ. ಸರ್ಕಾರದ ಸೌಲಭ್ಯ ಸಾರ್ವಜನಿಕರಿಗೆ ಲಭಿಸದೆ ಅರ್ಜಿ ಹಾಕಲು ನಾಡ ಕಚೇರಿಗೆ ಅಲೆಯುವುದು ತಪ್ಪಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಕಿಯೋಸ್ಕ್ ಯಂತ್ರದ ಸೇವೆಗಳು

ರೇಷನ್ ಕಾರ್ಡ್, ಸಂಧ್ಯಾ ಸುರಕ್ಷಾ, ಜಾತಿ, ಆದಾಯ ಪ್ರವಾಣ ಪತ್ರ, ಕಂದಾಯ ಇಲಾಖೆ ವಿವಿಧ ಸೌಲಭ್ಯಗಳಿಗೆ ಅರ್ಜಿದಾರರು ನೇರವಾಗಿ ದಾಖಲೆಗಳನ್ನು ಸ್ಕಾೃನ್ ಮಾಡಿ ಅರ್ಜಿ ಸಲ್ಲಿಸಲು ಯಂತ್ರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಹಾಕಿ ಸ್ವೀಕೃತಿ ಪಡೆಯಬಹುದು. ಅರ್ಜಿ ಶುಲ್ಕವನ್ನು ಕೂಡ ಈ ಯಂತ್ರದಲ್ಲಿಯೇ ನೀಡುವ ವ್ಯವಸ್ಥೆ ಇದೆ. ಜತೆಗೆ ತಾವು ಯಾವ ಸೇವೆ ಬಯಸಿ ಅರ್ಜಿ ಹಾಕಲಾಗಿದೆಯೋ, ಅದರ ಸ್ವೀಕೃತಿ ಸಂಖ್ಯೆ ಪರಿಶೀಲಿಸಿದರೆ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನೂ ತಿಳಿಯುವ ಅವಕಾಶ ಇದೆ. ಇದರಿಂದ ನಿಗದಿತ ಅವಧಿಯಲ್ಲಿ ಸಂಬಂಧಪಟ್ಟ ನಾಡ ಕಚೇರಿಗಳಲ್ಲಿ ಜನರು ಯಾವ ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸಲಾಗಿದೆಯೋ ಅದರ ದಾಖಲೆಗಳನ್ನು ಪಡೆಯಬಹುದಾಗಿದೆ.

ಸಕಾಲ ಸೇವೆ ‘ಇಂದು, ನಾಳೆ ಇನ್ನಿಲ್ಲ, ಹೇಳಿದ ಸಮಯ ತಪ್ಪಲ್ಲ’ ಎಂಬ ಸಕಾಲದ ಧ್ಯೇಯ ಇಲ್ಲವಾಗಿದೆ. ಸೇವೆ ನೀಡಬೇಕಿರುವ ಯಂತ್ರ ಜನರಿಂದ ದೂರವಾಗಿದೆ. ಸೇವೆಗೆ ಅರ್ಹವಾಗಿದೆಯೇ ಅಥವಾ ತಾಂತ್ರಿಕ ಸಮಸ್ಯೆಯೇ ತಿಳಿಯದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಜನರ ಉಪಯೋಗಕ್ಕೆ ಅಳವಡಿಸಿರುವ ಯಂತ್ರವನ್ನು ಬಳಕೆಗೆ ಸಿಗುವಂತೆ ವಾಡಬೇಕಿದೆ.

ಲೋಕೇಶ್, ರಾಮನಗರ

ಸಾರ್ವಜನಿಕರಿಗೆ ಸರ್ಕಾರದ ಸೇವೆ ಒದಗಿಸುವುದು ನಮ್ಮ ಕರ್ತವ್ಯ. ಸಕಾಲ ಯಂತ್ರದ ಪರಿಕರ ಜೋಡಣೆ, ವಿದ್ಯುತ್ ಸಂಪರ್ಕ ವಾಡಲಾಗಿದೆ. ಪ್ರಾಯೋಗಿಕವಾಗಿ ಪರೀಕ್ಷೆ ಕೂಡ ವಾಡಲಾಗಿದೆ. ಶ್ರೀದಲ್ಲೇ ಸಕಾಲ ಸೇವಾ ಕಿಯೋಸ್ಕ್ ಯಂತ್ರ ಜನರ ಸೇವೆಗೆ ಸಿದ್ಧವಾಗಲಿದೆ.

ಜಯಣ್ಣ, ಉಪವಿಭಾಗಾಧಿಕಾರಿಗಳ ಕಛೇರಿ ತಹಸೀಲ್ದಾರ್, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net