ತನಿಖೆಯ ವೇಳೆ ಪೇದೆ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಕುಖ್ಯಾತಿ ರೌಡಿ ಕಾಲಿಗೆ ಗುಂಡೇಟು

Rowdy
Published on

ರಾಮನಗರ: ಡಕಾಯಿತಿ ಸಂಬಂಧ ತನಿಖೆಗೆ ಕರೆದೊಯ್ದಿದ್ದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಕುಖ್ಯಾತಿ ರೌಡಿ ಕಾಲಿಗೆ ಗುಂಡಿ ಹಾರಿಸಿ ಬಂಧಿಸಿರುವ ಘಟನೆ ಮಾಗಡಿಯಲ್ಲಿ ಭಾನುವಾರ ನಡೆದಿದೆ.

ಕಿರಣ್ ಅಲಿಯಾಸ್ ತಮಾಣೆ ಎಂಬ ರೌಡಿಯ ಮೇಲೆ ಮಾಗಡಿ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ಫೈರಿಂಗ್ ನಡೆಸಿದ್ದಾರೆ. ಇಂದು ಬೆಳಗ್ಗೆ 7 ಗಂಟೆಗೆ ಬೆಂಗಳೂರು ಹೊರವಲಯದ ಕೆಂಗೇರಿ ಸಮೀಪದ ಸೂಲಿಕೆರೆ ಅರಣ್ಯದ ಬಳಿ‌ ಘಟನೆ ನಡೆದಿದೆ.

20 ದಿನಗಳ ಕೆಳಗೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಗ್ರಾಮದ ನಿವಾಸಿ‌ ಲೋಕನಾಥ್ ಎಂಬುವವರ ಮನೆಯಲ್ಲಿ ಡಕಾಯಿತಿ ನಡೆದಿತ್ತು. 13 ಮಂದಿ ಡಕಾಯಿತಿ ಮಾಡಿದ್ದರು ಎನ್ನಲಾಗಿದೆ. ಪ್ರಕರಣ ಸಂಬಂಧ ಆರೋಪಿ ಕಿರಣ್ ಬಂಧನವಾಗಿತ್ತು.

ಈ ಸಂಬಂಧ ತನಿಖೆಗೆ ಕರೆದುಕೊಂಡು ಹೋಗುವಾಗ ಕುದೂರು ಠಾಣೆ ಪೊಲೀಸ್ ಪೇದೆ ವೀರಭದ್ರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಸಿಪಿಐರಿಂದ ತಮಾಣೆ ಎಡಗಾಲಿಗೆ ಫೈರಿಂಗ್ ನಡೆದಿದೆ.

ಇನ್ನು 2016ರಲ್ಲಿ ಕೆಂಗೇರಿಯ ಮಾರಹನುಮ ಅಲಿಯಾಸ್ ಚಿಚಿ ಎಂಬಾತನನ್ನು ಕಿರಣ್​ ಕೊಲೆ ಮಾಡಿದ್ದ. ಕಿರಣ್ ಮೇಲೆ ಕೆಂಗೇರಿ, ತಾವರೆಕೆರೆ, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಒಟ್ಟು 11 ಪ್ರಕರಣಗಳು‌ ಇವೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net