More

    ಆಂಬುಲೆನ್ಸ್​ಗೆ ಸವಾರರು ಬಲಿ: ಬನ್ನೇರುಘಟ್ಟ ರಸ್ತೆಯ ಆನೇಪಾಳ್ಯ ಜಂಕ್ಷನ್​ನಲ್ಲಿ ತಡರಾತ್ರಿ ಅಪಘಾತ

    ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಆನೇಪಾಳ್ಯ ಜಂಕ್ಷನ್​ನಲ್ಲಿ ಬೈಕ್​ಗೆ ಖಾಸಗಿ ಆಸ್ಪತ್ರೆ ಆಂಬುಲೆನ್ಸ್ ಡಿಕ್ಕಿಯಾಗಿ ಸವಾರರು ಮೃತಪಟ್ಟಿದ್ದಾರೆ. ಬನ್ನೇರುಘಟ್ಟ ರಸ್ತೆಯ ರಾಜರಾಜೇಶ್ವರಿ ನಗರದ ನಿವಾಸಿಗಳಾದ ಚಿತ್ರ ಕಲಾವಿದ ಶಬಾಜ್ ಪಾಷ (20) ಮತ್ತು ಸೈಯದ್ ತನ್ವೀರ್ (17) ಮೃತರು.

    ಧಾರ್ವಿುಕ ಕೇಂದ್ರಕ್ಕೆ ಹೋಗಿದ್ದ ಇವರಿಬ್ಬರು ಶುಕ್ರವಾರ ತಡರಾತ್ರಿ 1 ಗಂಟೆಗೆ ಬೈಕ್​ನಲ್ಲಿ ಮನೆಗೆ ಮರಳುವಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೆಲಸ ಮುಗಿಸಿ ಬನ್ನೇರು ಘಟ್ಟ ರಸ್ತೆಯಿಂದ ಮನೆಗೆ ಹೊರಟಿದ್ದ ಆಂಬುಲೆನ್ಸ್ ಚಾಲಕ ಅತಿವೇಗವಾಗಿ ಆಂಬುಲೆನ್ಸ್ ಚಲಾಯಿಸಿದ್ದು ನಿಯಂತ್ರಣ ಸಿಗದೆ ಎದುರಿ ನಿಂದ ಬಂದ ಬೈಕ್​ಗೆ ಡಿಕ್ಕಿಹೊಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಸವಾರರನ್ನು ತನ್ನ ಆಂಬುಲೆನ್ಸ್​ನಲ್ಲೇ ಚಾಲಕ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾನೆ. ಅಲ್ಲದೇ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ ಆಸ್ಪತ್ರೆಗೆ ಸೇರಿಸಿದ್ದ. ಅಲ್ಲಿಂದ ಮತ್ತೆ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸುವಂತೆ ವೈದ್ಯರು ನೀಡಿದ ಸಲಹೆ ನೀಡಿದ್ದಾರೆ. ಅಷ್ಟರಲ್ಲಿ ಚಾಲಕ ಪರಾರಿಯಾಗಿದ್ದಾನೆ.

    ಚಿಕಿತ್ಸೆ ಫಲಿಸದೆ ಪಾಷ ಮತ್ತು ತನ್ವೀರ್ ಶನಿವಾರ ಮುಂಜಾನೆ ಮೃತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಶೋಕ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts