ದೇವರೇ ನಮ್ಮ ಸಂಸಾರಕ್ಕೆ ತೊಂದರೆ ಕೊಡಬೇಡ - ಭಕ್ತೆಯ ಮನವಿ ರೇವಣಸಿದ್ದೇಶ್ವರ ಹುಂಡಿಯಲ್ಲಿ ಪತ್ತೆ

Kailancha-Ph-01-Hundi Hana Enike-Srs Betta-26-2-23
Published on

ರಾಮನಗರ: ಶಿವನೇ ನಾನು ಎಂದು ಏನನ್ನೂ ಕೇಳಿಲ್ಲ, ಆಸೆಯೂ ಪಟ್ಟಿಲ್ಲ, ನನ್ನ ಸಂಸಾರವನ್ನು ಮಾತ್ರ ಚೆನ್ನಾಗಿ ಇಟ್ಟಿರು ಗಂಡ ಹೆಂಡತಿ ನಡುವೆ ಯಾವುದೇ ಜಗಳ ಬಾರದಂತೆ ನಮ್ಮನ್ನು ಹರಸು ಹೀಗೆಂದು ಭಕ್ತೆಯೊಬ್ಬರು ಬೇಡಿಕೊಂಡಿರುವ ಪತ್ರವೊಂದು ತಾಲೂಕಿನ ಕೈಲಾಂಚ ಹೋಬಳಿಯ ಪ್ರಸಿದ್ದ ಶ್ರೀ ರೇವಣಸಿದ್ದೇಶ್ವರ ಬೆಟ್ಟದ ಹುಂಡಿಯಲ್ಲಿ ಪತ್ತೆಯಾಗಿದೆ.

ಭಾನುವಾರ ಹುಂಡಿ ಶ್ರೀ ರೇವಣಸಿದ್ದೇಶ್ವರ ಬೆಟ್ಟದ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ವೇಳೆ, ಭಕ್ತೆಯೊಬ್ಬರು ಪತ್ರ ಒಂದನ್ನು ಬರೆದು ಶಿವನೇ ಯಾವುದರ ಮೇಲೂ ಆಸೆ ಪಡದ ನಾನು ಹೆಚ್ಚು ಆಸೆಪಟ್ಟಿದ್ದು ಒಂದೇ ಅದು ನನ್ನ ಮತ್ತು ಗಂಡನ ಮಧ್ಯೆ ಎಂದೂ ಜಗಳ ಬಾರದಿರಲಿ. ನಾನು ನನ್ನಗಂಡ ಮಗು ಸುಖವಾಗಿರುವಂತೆ ಹರಸು ಇನ್ನೇನನ್ನು ಬೇಡುವುದಿಲ್ಲ ಎಂದು ಕೇಳಿಕೊಂಡು ಹುಂಡಿಗೆ ಹಾಕಿದ್ದಾರೆ.

10 ಲಕ್ಷ ಸಂಗ್ರಹ: ರೇವಣಸಿದ್ದೇಶ್ವರ ದೇವಾಲಯದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಎಸ್.ಜೆ. ಯೇಸುರಾಜ್, ಉಪ ತಹಸೀಲ್ದಾರ್ ರುದ್ರಮ್ಮ , ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆದು ಹಣ ಏಣಿಕೆ ಮಾಡಲಾಯಿತು.

ಈ ವೇಳೆ ಎಲ್ಲಾ ಹುಂಡಿಗಳಿಂದ ಒಟ್ಟು 9,48,320 ರೂಗಳು ಸಂಗ್ರಹವಾಗಿತ್ತು. ಬ್ಯಾಂಕ್ ಖಾತೆಗೆ ಜಮೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net