

ಕೈಲಾಂಚ: ಬುಧವಾರ ರಾತ್ರಿ ಸುರಿದ ಮಳೆಗೆ ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಕೆಂಗಲ್ ಆಂಜನೇಯ ಗ್ರಾಮಾಂತರ ಪ್ರೌಢಶಾಲೆ ಆವರಣದ ಕಾಂಪೌಂಡ್ ಕುಸಿದಿದೆ. ಏಪ್ರಿಲ್ ಮೊದಲ ಅಥವಾ ಕೊನೆಯ ವಾರದಲ್ಲಿ ಮುಂಗಾರುಪೂರ್ವ ಮಳೆ ಆಗಬೇಕಿತ್ತು. ಆದರೆ, ಈ ಬಾರಿ ಮೇ ಮೊದಲ ವಾರದಲ್ಲಿ ಸುರಿದಿದೆ.
ಮಂಗಳವಾರ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿತ್ತು. ಬುಧವಾರ ರಾತ್ರಿ ಹೆಚ್ಚಿನ ಮಳೆಯಾದ ಕಾರಣ ಚರಂಡಿಯಲ್ಲಿ ಮೇಲಿನಿಂದ ನೀರು ಬಂದ ಕಾರಣ ಶಾಲಾ ಆವರಣಕ್ಕೆ ನೀರು ನುಗ್ಗಿದ್ದು, ಹೊರಹೋಗಲು ಸಾಧ್ಯವಾಗದೆ, ನೀರಿನ ತೀವ್ರತೆಗೆ ಕಾಂಪೌಂಡ್ ನೆಲಕಚ್ಚಿದೆ.
ಇತ್ತೀಚೆಗೆ ಕಟ್ಟಿದ್ದ ಕಾಂಪೌಂಡ್ ಎನ್ನಲಾಗಿದೆ. ಶಾಲಾ ಆವರಣದ ಕೆಳಭಾಗದಲ್ಲಿರುವ ಕಾರಣ ಗ್ರಾಮದ ಮೇಲ್ಭಾಗದಲ್ಲಿನ ಚರಂಡಿ ನೀರು 3&4 ಕಡೆಗಳಿಂದ ಬರುತ್ತದೆ. ಚರಂಡಿ ಚಿಕ್ಕದಾಗಿರುವ ಕಾರಣ, ಶಾಲಾ ಆವರಣದಿಂದ ನೀರು ನುಗ್ಗಿ ಹೊರ ಹೋಗಲು ಸಾಧ್ಯವಾಗದೆ ಕಾಂಪೌಂಡ್ ಮೇಲೆ ಒತ್ತಡ ಹೆಚ್ಚಾಗಿ ಕುಸಿದಿದೆ ಎನ್ನಲಾಗಿದೆ.