ರಾಮನಗರ ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರ ದಾಳಿ

IMG-20230719-WA0154.jpg
Published on

ರಾಮನಗರ: ಅಕ್ರಮ ಚಟುವಟಿಕೆಗಳ ಅನುಮಾನದ ಮೇರೆಗೆ, ನಗರದ ಜಿಲ್ಲಾ ಕಾರಾಗೃಹದ ಮೇಲೆ ಬುಧವಾರ ಸಂಜೆ ಪೊಲೀಸರು  ದಾಳಿ ನಡೆಸಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರ ಟಿ.ವಿ. ಸುರೇಶ್ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು, ಕೈದಿಗಳ ಕೊಠಡಿಗಳನ್ನು ಶೋಧ ಮಾಡಿ, ಅನುಮಾನಾಸ್ಪದ ಕೈದಿಗಳನ್ನು ವಿಚಾರಣೆ ನಡೆಸಿದ್ದಾರೆ. ಜೈಲಿನ ಸಿಬ್ಬಂದಿಯಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ.

‘ಜೈಲಿನಲ್ಲಿ ಗಾಂಜಾ ಸೇವನೆ, ಮೊಬೈಲ್ ಬಳಕೆ ಸೇರಿದಂತೆ ಇತರ ಅಕ್ರಮ ಚಟುವಟಿಕೆಗಳ ನಡೆಯುತ್ತಿರುವ ದೂರಿನ ಹಿನ್ನೆಲೆಯಲ್ಲಿ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಶೋಧ ನಡೆಸಲಾಯಿತು. ಈ ವೇಳೆ, ಯಾವುದೇ ವಸ್ತುಗಳು ಪತ್ತೆಯಾಗಿಲ್ಲ ಎಂದು ಟಿ.ವಿ. ಸುರೇಶ್  ತಿಳಿಸಿದರು.

ರಾಮನಗರ ಟೌನ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ನರಸಿಂಹಮೂರ್ತಿ, ಗ್ರಾಮಾಂತರ ಠಾಣೆಯ ಗಿರಿರಾಜ್, ಸಿಇಎನ್ ಠಾಣೆಯ ಪುಟ್ಟೇಗೌಡ, ಮಹಿಳಾ ಠಾಣೆಯ ಬಿ.ಕೆ ಪ್ರಕಾಶ್, ಡಿಸಿಆರ್‌ಬಿ ಇನ್‌ಸ್ಪೆಕ್ಟರ್ ಎಚ್.‌ಎಸ್‌. ನವೀನ್‌ ಹಾಗೂ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net