ಲಾರಿ ವಿಚಾರಕ್ಕೆ ಗಲಾಟೆ ಕೊಲೆಯಲ್ಲಿ ಅಂತ್ಯ

crime
Published on

ರಾಮನಗರ: ಲಾರಿ ವಿಚಾರಕ್ಕೆ ಸಂಬಂಧಿಕರ ಇಬ್ಬರ ನಡುವಿನ ಮಾತುಕತೆಯಲ್ಲಿ ಜಗಳಕ್ಕೆ ತಿರುಗಿ, ಈ ವೇಳೆ ಮಧ್ಯವರ್ತಿಯಾಗಿ ಬಂದಿದ್ಧ  ವ್ಯಕ್ತಿ ಕೊಲೆಯಾಗಿರುವ ಘಟನೆ ತಾಲೂಕಿನ ಹುಚ್ಚಮ್ಮನದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಮದ್ದೂರು ಮೂಲದ ನಿವಾಸಿ ಮಂಜ( 28) ಕೊಲೆಯಾದವನು.

ಲಾರಿ ಮಾಲಿಕ ರಘು ಮತ್ತು ಕೊಲೆಯಾದ ಮಂಜು ಇಬ್ಬರೂ ಸಂಬಂಧಯಾಗಿದ್ದು, ಕೊಲೆ ಮಾಡಿದ ಆರೋಪಿ ಮಂಜು ಎಂಬುವನ ಜೊತೆಗೆ ಲಾರಿ ಬಾಡಿಗೆ ಸೇರಿದಂತೆ ಇತರೆ ವಿಚಾರಕ್ಕೆ ಸಂಬಂದಿಸಿದಂತೆ ಮಾತುಕತೆ ನಡೆದು ಇದು ವಿಕೋಪಕ್ಕೆ ತಿರುಗಿದೆ.

ಕೊಲೆಯಾದ ಮಂಜು ಇಬ್ಬರ ನಡುವಿನ ಮಾತುಕತೆಗೆ ಮಧ್ಯವರ್ತಿಯಾಗಿ ಬಂದಿದ್ದು, ಜಗಳ ತಾರಕಕ್ಕೆ ಏರಿದ ವೇಳೆ ಆರೋಪಿ ಬೆನ್ನಳ್ಳಿ ಗ್ರಾಮದ ನಿವಾಸಿ ಮಂಜು, ಮದ್ದೂರು ನಿವಾಸಿ ಮಂಜುವಿನ ಮೇಲೆ ಹಲ್ಲೆ ನಡೆಸಿದ್ದು, ಮಂಜು ಮೃತಪಟ್ಟಿದ್ದಾನೆ.

ಈ ಘಟನೆ ಗುರುವಾರ ರಾತ್ರಿ ನಡೆದಿದ್ದು, ಈ ಸಂಬಂಧ ರಾಮನಗರ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net