ಮೂಲಸೌಕರ್ಯ ಒದಗಿಸಲು ಆದ್ಯತೆ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ

RMGM-Ph-001-MLA - IQbal - Husain - Road Charandi Guddali pooje Ramanagara-31-7-2023
Published on

ರಾಮನಗರ

ಕ್ಷೇತ್ರದ ಜನರಿಗೆ ಮೂಲಸೌಕರ್ಯ ಒದಗಿಸುವುದು ಆದ್ಯತೆಯಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ರಾಮನಗರದ ಮಾಗಡಿ ರಸ್ತೆ, ಬಿಜಿಎಸ್ ಸರ್ಕಲ್‌ನಲ್ಲಿ ರಸ್ತೆ, ಚರಂಡಿ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ನಗರದಲ್ಲಿ ಪ್ರಾಥಮಿಕ ಹಂತದಿಂದ ಕೆಲಸ ಮಾಡಬೇಕಿದೆ. ಕುಡಿಯುವ ನೀರು, ಚರಂಡಿ ಸೇರಿ ಮೂಲಸೌಕರ್ಯ ಅಭಿವೃದ್ಧಿ ಮತ್ತು 2ನೇ ಹಂತದ ಕೆಲಸಗಳು ನಡೆಯುತ್ತಿವೆ. ಇನ್ನಷ್ಟು ಅನುದಾನಕ್ಕೆ ಮನವಿ ಮಾಡಲಾಗಿದೆ. ಎಲ್ಲೆಲ್ಲಿ ಅಭಿವೃದ್ಧಿ ಕೆಲಸಗಳು ಆಗಬೇಕು ಎಂಬುದನ್ನು ಪಟ್ಟಿ ಮಾಡಲಾಗುತ್ತಿದೆ ಎಂದರು.

ಮಾಗಡಿ ರಸ್ತೆ ಇನ್ನಷ್ಟು ವಿಶಾಲ ಆಗಬೇಕಿದೆ. ರಸ್ತೆ ಅಗಲೀಕರಣ ಆಗುವ ಕಾರಣ ಪೂರ್ಣ ರಸ್ತೆ ಅಭಿವೃದ್ಧಿ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. 1 ಸಾವಿರ ಮೀಟರ್ ಚರಂಡಿ, 400 ಮೀಟರ್ ರಸ್ತೆ ಅಭಿವೃದ್ಧಿ ಕೆಲಸ ಆಗುತ್ತಿದೆ ಎಂದರು.

ಹಾರೋಹಳ್ಳಿ ಹೊಸದಾಗಿ ತಾಲೂಕು ಕೇಂದ್ರ ಆಗಿದ್ದರಿಂದ ಮೂಲಸೌಲಭ್ಯ ಒದಗಿಸಬೇಕಿದೆ. ವಾರದ ಏಳು ದಿನವೂ ರಾಮನಗರ, ಹಾರೋಹಳ್ಳಿಯಲ್ಲೇ ಇದ್ದು ಅಭಿವೃದ್ಧಿ ಮತ್ತು ಜನರ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.

ನಗರಸಭೆ ಉಪಾಧ್ಯಕ್ಷ ಸೋಮಶೇಖರ್, ನಗರಸಭೆ ಸದಸ್ಯರಾದ ಜಯಲಕ್ಷ್ಮಮ್ಮ, ವಿಜಯಕುಮಾರಿ, ಆಯಿಷಾಬಾನು, ಮುಖಂಡರುಗಳಾದ ರವಿ, ಷಡಕ್ಷರಿ, ಅನಿಲ್ ಜೋಗಿಂದರ್, ಗುರುಪ್ರಸಾದ್, ಪ್ರಸನ್ನ, ರೇವಣ್ಣ, ಲೋಹಿತ್‌ಬಾಬು, ಲೋಕೋಪಯೋಗಿ ಇಲಾಖೆ ಎಇಇ ಶಂಕರ್, ಎಇ ಕೃಷ್ಣಯ್ಯಶೆಟ್ಟಿ ಮುಂತಾದವರು ಇದ್ದರು.

ಮೇವು ದರ ಹೆಚ್ಚಾಗಿ ಹೈನುಗಾರಿಕೆಯಲ್ಲಿ ನಷ್ಟ ಉಂಟಾಗುತ್ತಿದೆ. ಹಾಲಿನ ಬೆಲೆ ಹೆಚ್ಚಿಸಿ ಎಂದು ರೈತರು ಚುನಾವಣೆ ಪೂರ್ವದಿಂದಲೂ ಒತ್ತಾಯಿಸುತ್ತಾ ಬಂದಿದ್ದರು. ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳ ಜತೆಗೆ ಇದು ಕೂಡ ಬೇಡಿಕೆ ಇತ್ತು. ಸರ್ಕಾರ ರೈತರ ಒತ್ತಾಯದಂತೆ ಲೀಟರ್ ಹಾಲಿಗೆ 3 ರೂ. ಹೆಚ್ಚಿಗೆ ನೀಡುತ್ತಿರುವುದು ಸಂತಸದ ವಿಷಯ.

ಇಕ್ಬಾಲ್ ಹುಸೇನ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net