

ರಾಮನಗರ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್.ಬಸವರಾಜು ಅವರು ಸನ್ಮಾನಿಸಿದರು.
ಇತ್ತೀಚಿಗೆ ಮಾಗಡಿ ತಾಲೂಕಿನ ದೊಡ್ಡಯ್ಯನಪಾಳ್ಯದ ಫಾಮ್ರ್ಹೌಸ್ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಪಂಜ, ಕುಸ್ತಿ ಕ್ರೀಡೆಯಲ್ಲಿ ಪ್ರಥಮ ಪ್ರಶಸ್ತಿ ವಿಜೇತರಾದ ತಿರುಮಲೆ ಕೃಷ್ಣಪ್ಪ, ರಾಮನಗರ ರತ್ನ ಪ್ರಶಸ್ತಿ ಪುರಸತ ಪತ್ರಕರ್ತ ದೊಡ್ಡಬಾಣಗೆರೆ ಮಾರಣ್ಣ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿನಿ ರಚಿತಾ ತಟ್ವಾಳ್ ಇವರಿಗೆ ಲ್ಯಾಪ್ ಟಾಪ್ ಕೊಡುವುದರ ಮೂಲಕ ಸನ್ಮಾನಿಸಿದರು.
ಈ ವೇಳೆ ಸಾಧಕರನ್ನು ಗುರುತಿಸಿ, ಗೌರವಿಸಿದಾಗ ಮತ್ತಷ್ಟು ಜನರಿಗೆ ಸ್ಪೂರ್ತಿ ದೊರೆಯುತ್ತದೆ. ಇದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಬಸವರಾಜು ಅಭಿಪ್ರಾಯಪಟ್ಟರು.
ಯುವಕವಿ ತೋಟದ ಮನೆ ಗಿರೀಶ್, ಪುರಸಭೆ ಮಾಜಿ ಅಧ್ಯೆ ಭಾಗ್ಯಮ್ಮ, ಸದಸ್ಯರಾದ ಹೊಸಪೇಟೆ ಅಶ್ವತ್ಥ್, ಎಂ.ಆರ್.ರಾಘವೇಂದ್ರ, ಕಿರಣ್ ಕೆ.ಆರ್.ಕೆಂಚನಹಳ್ಳಿ, ಕೆಂಪಣ್ಣ, ಮೂರ್ತಿ, ಜಗದೀಶ್, ಐಯಂಡಳ್ಳಿ ಕುಮಾರ್, ಗ್ರಾಪಂ ಸದಸ್ಯರಾದ ರಂಗನಾಥ್, ತಿರುಮಲೆ ಬಸವರಾಜ್, ಮಾರಪ್ಪ, ಕುದೂರು ರಾಮ್ ಪ್ರಸಾದ್, ಆನಂದ್, ತಟ್ವಾಳ್ ಉಮೇಶ್, ಪಟೇಲಪ್ಪನವರು, ಗೊಲ್ಲರಟ್ಟಿ ಪೂಜಾರಪ್ಪ, ಬಿಡದಿಯ ರಂಗಸ್ವಾಮಿ ಮುಂತಾದವರು ಇದ್ದರು.