ಪರಿಸರ ರಸುವ ಸಂಕಲ್ಪ ಮಾಡಿ ವಿದ್ಯಾರ್ಥಿಗಳಿಗೆ ಮುಖ್ಯಶಿಕ್ಷಕಿ ಶಶಿಕಲಾ ಕರೆ

bvp-2
Published on

ಚನ್ನಪಟ್ಟಣ

ತಾಲೂಕಿನ ಮತ್ತೀಕೆರೆ - ಶೆಟ್ಟಿಹಳ್ಳಿಯ ಸರ್ಕಾರಿ ಆದರ್ಶ ವಿದ್ಯಾಲಯ ಹಾಗೂ ಕುವೆಂಪು ಶತಮಾನೋತ್ಸವ ಶಾಲಾ ಆವರಣದಲ್ಲಿ ಭಾರತ್​ ವಿಕಾಸ್​ ಪರಿಷತ್​ (ಭಾವಿಪ) ಕಣ್ವ ಶಾಖೆ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ  ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಆದರ್ಶ ವಿದ್ಯಾಲಯದ ಮುಖ್ಯಶಿಕ್ಷಕಿ ಶಶಿಕಲಾ ಮಾತನಾಡಿ, ಅರಣ್ಯ ಸಂಪತ್ತನ್ನು ಮಾನವ ನಿರಂತರವಾಗಿ ನಾಶ ಮಾಡುತ್ತಿರುವುದರಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಸರ ಸಂರಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಭಾವಿವ ಅಧ್ಯಕ್ಷ ಪಿ.ಗುರುಮಾದಪ್ಪ ಮಾತನಾಡಿ, ಪರಿಷತ್​ ವತಿಯಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಲ್ಲಿ ಪರಿಸರ ಸಂರಣೆಯೂ ಒಂದು. ಪರಿಸರವನ್ನು ಕಾಪಾಡದಿದ್ದರೆ ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪರಿಷತ್​ ಕಾರ್ಯಕ್ರಮಗಳನ್ನು ರೂಪಿಸಿದ್ದು, ವಿದ್ಯಾರ್ಥಿಗಳಿಗೆ ಭವಿಷ್ಯದ ದಿನಗಳು ಉತ್ತಮವಾಗಿರಬೇಕಾದರೆ ಇಂದಿನಿಂದಲೇ ಪರಿಸರ ಉಳಿಸಿ ಹಾಗೂ ಬೆಳೆಸುವ ಸಂಕಲ್ಪ ಮಾಡಬೇಕು ಎಂದರು.

ನಿವೃತ್ತ ಅಧ್ಯಾಪಕ ವಸಂತಕುಮಾರ್​ ಮಾತನಾಡಿ, ಮರಗಿಡಗಳು ನಮಗೆ ಬೇಡವಾದ ಇಂಗಾಲ ಅಮ್ಲವನ್ನು ಪಡೆದುಕೊಂಡು ಪ್ರಾಣವಾಯು ಆಮ್ಲಜನಕವನ್ನು ನೀಡುತ್ತವೆ. ಆದ್ದರಿಂದ, ಈ ಶಾಲೆಯಲ್ಲಿರುವ 400 ವಿದ್ಯಾರ್ಥಿಗಳು ಪ್ರತಿಯೊಬ್ಬರು ತಲಾ 2 ಸಸಿಯಂತೆ ಶಾಲಾ ಆವರಣದಲ್ಲಿ ನೆಟ್ಟು ಪೋಷಿಸಬೇಕು ಎಂದು ತಿಳಿಸಿದರು.

ಬೊಂಬೆನಾಡು ಗಮಕ ಟ್ರಸ್ಟ್​ ಅಧ್ಯಕ್ಷ ಡಿ.ಪುಟ್ಟಸ್ವಾಮಿಗೌಡ, ಕುವೆಂಪು ಶತಮಾನೋತ್ಸವ ಶಾಲೆ ಶಿಕ್ಷಕ ಕರಿಯಪ್ಪ, ಭಾವಿಪ ಪದಾಧಿಕಾರಿಗಳಾದ ಶ್ರೀನಿವಾಸ ರಾಜೇ ಅರಸು, ಶಿವಕುಮಾರ್​, ಬೈ.ಪು. ಪ್ರಭುಸ್ವಾಮಿ, ವಿ.ಟಿ.ರಮೇಶ್​, ವೀರೇಗೌಡ, ಎಲ್​. ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net