ಶಾಸಕ ಎ.ಮಂಜುನಾಥ್ ವಿರುದ್ಧ ಮತ್ತೊಂದು ಆರೋಪ ಮಾಡಿದ ಬಾಲಕೃಷ್ಣ

16 RMN-MGD P1 (1)
Published on

ಮಾಗಡಿ: ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾರಾಗಬೇಕು ಎಂದು ನಾನು ತಿರ್ಮಾನಿಸುತ್ತೇನೆಂದು  ಶಾಸಕ ಎ.ಮಂಜುನಾಥ್ ನೀಡಿರುವ ದಾಖಲೆಗಳು ನನ್ನ ಬಳಿ ಇವೆ, ಸಮಯ ಬಂದಾಗ ಪ್ರದರ್ಶಿಸುತ್ತೇನೆ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಬಾಂಬ್ ಸಿಡಿಸಿದರು.

 ತಾಲೂಕಿನ ಚಿಕ್ಕಮುದಿಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಕೆರೆ ಗ್ರಾಮದಲ್ಲಿ ಗುರುವಾರ ಜನಾಶೀರ್ವಾದ ಬೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡ ಕೆ.ಆರ್.ಪ್ರಸಾದ್‌ಗೌಡ ಕ್ಷೇತ್ರದಲ್ಲಿ ಮೂಗುತಿ ಸೇರಿದಂತೆ ಏನು ಬೇಕಾದರೂ ಹಂಚಿಕೊಳ್ಳಲಿ, ನಾನು ಯಾರಿಗೆ ಬಿಜೆಪಿ ಟಿಕೇಟು ಕೊಡಿಸಬೇಕು ಎಂದು ತಿರ್ಮಾನಿಸಿದ್ದೇನೆ ಎಂದು ಮಾತನಾಡಿದ್ದಾರೆ  ಈ ಬಗ್ಗೆ ನನ್ನ ಬಳಿ  ತುಣುಕುಗಳು  ಸಮಯ ಬಂದಾಗ ಬಿಡುಗಡೆ ಮಾಡುವುದಾಗಿ ಎಚ್.ಸಿ.ಬಾಲಕೃಷ್ಣ ಹೊಸಬಾಂಬ್ ಸಿಡಿಸಿದ ಅವರು ಡಾ.ಸಿ.ಎನ್. ಆಶ್ವತ್ಥ್ ನಾರಾಯಣ್ ಉಸ್ತುವಾರಿ ಸಚಿವರಾದ ಮೇಲೆ ತಾಲೂಕಿನಲ್ಲಿ ಬಿಜೆಪಿ ಸತ್ತು ಹೋಗಿದೆ, ನಾಲ್ಕು ಗುಂಪುಗಳಾಗಿವೆ ಈ ಮಧ್ಯೆ ಅವರು ಇಲ್ಲಿ ತೋರಿಸಿ ಅಲ್ಲಿ ಹಾರಿಸುತ್ತಾರೆ ಎಂದು ಲೇವಡಿ ಮಾಡಿದರು.

    ಆಪ್ರಭುದ್ದತೆ ನಾಯಕನ ಬಾಯಿಯಲ್ಲಿ ಸಿದ್ದರಾಮಯ್ಯ ಅವರಿಗೆ ಹೊಡೆಸುವ ಬಗ್ಗೆ ಹೇಳಿಕೆ ಬಂದಿದೆ, ಸಚಿವ ಆಶ್ವತ್ಥ ನಾರಾಯಣ್ ಮಾತನ್ನು ಕೇಳಿ ಸಿದ್ದರಾಮಯ್ಯ ಅವರ ಮೇಲೆ ಯಾರಾದರೂ ಒಂದು ಕಲ್ಲು ಎಸೆದರೆ ಆಶ್ವಥ್ ನಾರಾಯಣ್ ರಾಜ್ಯದಲ್ಲಿ ಓಡಾಡಲು ಸಾಧ್ಯವೇ? ಮಾಗಡಿಯಲ್ಲಿ ಓಡಾಡಲಿ ನೋಡೋಣ ಎಂದು ಸವಾಲು ಹಾಕಿದರು.

  ಕಾಂಗ್ರೆಸ್ ಕಾರ್ಯಕರ್ತರು ಮುಖಂಡರಾದ ನಾವು ಬದುಕಿದ್ದೇವೆ. ಮಾತನಾಡುವ ವೇಳೆ  ಆಲೋಚಿಸಿ ಮಾತನಾಡಲಿ,  ಸಚಿವರು ಕಷ್ಟ ಪಟ್ಟು ಅಧಿಕಾರಕ್ಕೆ ಬಂದಿಲ್ಲ ಹಣಬಲದಿಂದ ಅಧಿಕಾರಕ್ಕೆ ಬಂದಿರುವುದರಿಂದ ಈ ಹಣದ ಮದದಿಂದ ಇಂಥಹ ಮಾತುಗಳು ಬರುತ್ತಿದೆ. ಕ್ಷಮೆ ಕೇಳದಿದ್ದರೆ ಉಗ್ರಹೋರಾಟ ನಡೆಸಲಾಗುವುದು ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

   ವೈಜಿಗುಡ್ಡ-ಮಂಚನಬೆಲೆ ಜಲಾಶಯಕ್ಕೆ ನೀರು ಬಿಡುವ ವಿಚಾರದಲ್ಲಿ ಎಂಜಿನಿಯರ್ ವೆಂಕಟೇಗೌಡ  ಶಾಸಕರಿಗೆ ಪೋನ್ ಮಾಡಿಲ್ಲ ಈ ಬಗ್ಗೆ ಶಾಸಕರಿಂದ ಸತ್ಯ ಬಾಯಿಬಿಡಿಸಲು ಕಾಲ್‌ಲಿಸ್ಟ್‌ನನ್ನ ಬಳಿ ಇದೆ ಎಂದು ಹೇಳಿದ್ದೇನೆ. ಶಾಸಕರ ಕಾಲ್‌ಲಿಸ್ಟ್ ನನ್ನ ಬಳಿ ಇಲ್ಲ ಅದನ್ನು ಪಡೆಯಲು ಸಾಧ್ಯವೆ. ಈಗ ನನ್ನ ವಿರುದ್ದ ಸೈಬರ್ ಠಾಣೆಗೆ ದೂರು ನೀಡಿ ಜೈಲಿಗೆ ಕಳುಹಿಸಲು  ಶಾಸಕರು ಮುಂದಾಗಿದ್ದಾರೆ ಎಂದು ಆರೋಪಿಸಿದರು.

    ಜಿ.ಪಂ.ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ತಾ.ಪಂ.ಮಾಜಿ ಅಧ್ಯಕ್ಷ ಶಿವರಾಜು, ಕುಮಾರು, ಗ್ರಾ.ಪಂ. ಮಾಜಿ ಅಧ್ಯಕ್ಷ ರಮೇಶ್, ಶಿವಕುಮಾರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net