

ರಾಮನಗರ : ನಗರದ ರಾಮ್‌ಘಡ್ ಹೋಟೆಲ್‌ನ ಕೊಠಡಿಯಲ್ಲಿ ಯುವಕನೊಬ್ಬನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ. ರಾಮನಗರದ ಗಾಂಧಿನಗರ ಬಡಾವಣೆ ವಾಸಿ ಶೇಷಾದ್ರಿ ಅಲಿಯಾಸ್ ಬಾಲಾಜಿ (23) ಮೃತ ಯುವಕ.
ಗುರುವಾರ ಬೆಳಿಗ್ಗೆ ಶೇಷಾದ್ರಿ ಹೋಟೆಲ್‌ನಲ್ಲಿ ರೂಮ್ ಬಾಡಿಗೆ ಪಡೆದಿದ್ದನು. ರೂಮ್ ಸ್ವಚ್ಛತೆ ಮಾಡಲು ಲಾಡ್ಜ್ ಸಿಬ್ಬಂದಿ ದೂರವಾಣಿಯಲ್ಲಿ ಸಂಪರ್ಕಿಸಿದಾಗ ಕರೆ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಕೊಠಡಿ ಬಳಿ ನೋಡಿದಾಗ ರೂಮ್ ನ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ದೊರಕಿದೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕಾರಣ ತಿಳಿದು ಬಂದಿಲ್ಲ.