ಪೆಟ್ರೋಲ್ ಬಂಕ್ ನಲ್ಲಿ ಉಚಿತ ಮಜ್ಜಿಗೆ

15-05-rama-petrole
Published on

ರಾಮನಗರ: ಬೇಸಿಗೆ ಎಲ್ಲರನ್ನೂ ಹೈರಾಣಾಗಿಸಿದೆ. ಬಿಸಿಲ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇದರಿಂದಾಗಿ ಜನತೆ ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

ಆದರೆ ಇಲ್ಲೊಂದು ಪೆಟ್ರೋಲ್ ಬಂಕ್ ಮಾಲೀಕರು ತನ್ನ ಗ್ರಾಹಕರಿಗೆ ತಣ್ಣಗಿನ ಮಜ್ಜಿಗೆ ನೀಡುವ ಮೂಲಕ ಅವರ ದಾಹವನ್ನು ತಣಿಸುವ ಕೆಲಸ ಮಾಡುತ್ತಿದ್ದಾರೆ.

ಹೌದು, ಚನ್ನಪಟ್ಟಣದ ಚಿಕ್ಕಮಳೂರು ಬಳಿ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿರುವ ಸಿಪಿಆರ್ ಪೆಟ್ರೋಲ್ ಬಂಕ್‌ನ ಮಾಲೀಕ ಸಿ.ಪಿ.ಕಿರಣ್ ಪ್ರತಿ ದಿನ ಸುಮಾರು 15 ಲೀಟರ್ ಮೊಸರಿನಲ್ಲಿ ಮಜ್ಜಿಗೆ ತಯಾರಿಸಿ ದಾಹ ಎಂದು ಬರುವ ಪ್ರತಿ ಗ್ರಾಹಕರಿಗೆ ಮತ್ತು ಸಾರ್ವಜನಿಕರಿಗೆ ಮಜ್ಜಿಗೆಯನ್ನು ವಿತರಣೆ ಮಾಡುತ್ತಿದ್ದಾರೆ.

ಈ ಮೂಲಕ ಬಿಸಿಲ ಬೇಗೆಯಿಂದ ಬಸವಳಿದವರ ನೆರವಿಗೆ ಧಾವಿಸಿ ಅಳಿಲು ಸೇವೆಯನ್ನು ಮಾಡುತ್ತಿದ್ದು, ಇದಕ್ಕೆ ಬಂಕ್‌ನ ಸಿಬ್ಬಂದಿ ಸಾಥ್ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net