ಕಾಲೇಜು ಆಯ್ಕೆ ವಿಚಾರದಲ್ಲಿ ಬೇಸರ ಯುವಕ ಆತ್ಮಹತ್ಯೆ

22 RMN-MGD P2 (1)
Published on


ಮಾಗಡಿ: ಕಾಲೇಜು ಆಯ್ಕೆ ವಿಚಾರವಾಗಿ ಉಂಟಾದ ಗೊಂದಲದಿಂದ ನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗುರುವಾರ ನಡೆದಿದೆ.
ಪಟ್ಟಣದ ಕನ್ನಿಕಾಮಹಲ್​ ರಸ್ತೆಯ ಸಿಮೆಂಟ್​ ಅಂಗಡಿ ಮಾಲೀಕ ಕಿರಣ್​ ಅವರ ಪುತ್ರ ಸಾಯಿಸನ್ವಿತ್​ (22) ಮೃತ.

ಬೆಂಗಳೂರಿನ ಬಿಎಂಎಸ್​ ಕಾಲೇಜಿನಲ್ಲಿ ಆರ್ಕಿಟೆಕ್ಟ್​ ಪದವಿ ಮುಗಿಸಿ ವಿದೇಶದಲ್ಲಿ ಎಂಎಸ್​ ಮಾಡಲು ಮಾಡಲು ಆಸೆಪಟ್ಟಿದ್ದ. ಆದರೆ, ಹಲವು ಕಾರಣಗಳಿಂದ ಈಡೇರದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರಿನಲ್ಲಿದ್ದ ಸಾಯಿಸನ್ವಿತ್​ ಗುರುವಾರ ಬೆಳಗ್ಗೆ ತಂದೆ ಜತೆ ಮಾಗಡಿಗೆ ಬಂದಿದ್ದ. ತಂದೆ ಅಂಗಡಿ ತೆರೆಯಲು ತೆರಳಿದ ನಂತರ ರೂಮ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿದ್ದ ತಾತ, ಅಜ್ಜಿ ಮೊಮ್ಮಗನನ್ನು ತಿಂಡಿಗೆ ಕರೆಯಲು ರೂಮ್​ ಬಳಿ ಹೋದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಕೂಡಲೇ ಆಸ್ಪತ್ರೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದ. ನನ್ನ ಸಾವಿಗೆ ಯಾರೂ ಕಾರಣರಲ್ಲ. ಅಪ್ಪ, ಅಮ್ಮನಿಗೆ ಥ್ಯಾಂಕ್ಸ್​ ಎಂದು ಡೆತ್​ನೋಟ್​ ಬರೆದಿಟ್ಟಿದ್ದಾನೆ ಎನ್ನಲಾಗಿದೆ.

ಮುಂದಿನ ಶನಿವಾರ ಕುಟುಂಬ ಸಮೇತ ಆಸ್ಟ್ರೇಲಿಯಾ ಪ್ರವಾಸ ತೆರಳಲು ಕಿರಣ್​ ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಗುರುವಾರ ಸಾಯಂಕಾಲ ಅಂತ್ಯಕ್ರಿಯೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net