ಇಬ್ಬರು ಅನಾಥ ಹೆಣ್ಣು ಮಕ್ಕಳ ರಕ್ಷಣೆ ಮಾಡಿದ ಸಿಡಿಪಿಓ

BSF Rescue
Published on

ಮಾಗಡಿ: ಪಟ್ಟಣದ ರಂಗನಾಥಸ್ವಾಮಿ ದೇವಾಲಯದ ಬಳಿ ಅಸ್ವಸ್ಥರಾಗಿದ್ದ ಇಬ್ಬರು ಅಪರಿಚಿತ ಬಾಲಕಿಯರನ್ನು ಸೋಮವಾರ ಸಂಜೆ ರಕ್ಷಿಸಲಾಗಿದೆ.
ಪಾಲಕರಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ಇಬ್ಬರು ಹೆಣ್ಣುಮಕ್ಕಳು ದೇವಸ್ಥಾನದ ಬಳಿ ಅಸ್ವಸ್ಥರಾಗಿ ಬಿದ್ದಿದ್ದರು. ಈ ಹೆಣ್ಣು ಮಕ್ಕಳ ಬಗ್ಗೆ ಸ್ಥಳೀಯರಾದ ಶ್ರುತಿ ಎಂಬುವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ನಂತರ ಸಿಡಿಪಿಒ ಬಿ.ಎಲ್. ಸುರೇಂದ್ರ ಅವರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ತೆರಳಿದ ಸಿಡಿಪಿಒ ಮತ್ತು ಸಿಬ್ಬಂದಿ ಬಾಲಕಿಯರಿಂದ ಮಾಹಿತಿ ಪಡೆದು ರಾಮನಗರದ ಬಾಲಕಿಯರ ಬಾಲಮಂದಿರಕ್ಕೆ ದಾಖಲಿಸಿ ಪಾಲಕರ ಪತ್ತೆಗೆ ಕ್ರಮ ವಹಿಸಿದ್ದಾರೆ. ಬಾಲಕಿಯರು ತಿಪ್ಪಗೊಂಡನಹಳ್ಳಿ ಮೂಲದವರಾಗಿದ್ದು, ಭಿಕ್ಷಾಟಣೆಗೆ ದೂಡಿದ್ದ ಕಾರಣ ಪಾಲಕರ ಬಳಿ ತೆರಳಲು ನಿರಾಕರಿಸಿ ಇಲ್ಲಿಗೆ ಬಂದಿದ್ದಾಗಿ ಬಾಲಕಿಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net