ರಾಗಿ ಖರೀದಿ ಕೇಂದ್ರದಲ್ಲಿ ಶಾರ್ಟ್ ಸರ್ಕ್ಯೂಟ್ ಲಕ್ಷಾಂತರ ಬೆಲೆಯ ರಾಗಿಗೆ ಬೆಂಕಿ

16 RMN-MGD P4
???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಮಾಗಡಿ: ಶಾಕ್ ಸಕ್ಯೂರ್ಟ್‌ನಿಂದದಾಗಿ ಮಾಗಡಿ   ತಾಲೂಕಿನ ಸೋಲೂರು ಗದ್ದುಗೆ ಮಠದ ಬಳಿ ಸರ್ಕಾರಿ ರಾಗಿ ಖರೀದಿ ಗೋದಾಮಿನಲ್ಲಿ ಗುರುವಾರ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ಬೆಲೆ ಬಾಳುವ ಗೋಣಿ ಚೀಲ, ರಾಗಿ ಬೆಂಕಿಗೆ ಭಸ್ಮವಾಗಿದೆ.

ಗುರುವಾರ ಮುಂಜಾನೆ ಟ್ರಾನ್ಸ್‌ಪಾರಂ ಸ್ಪೋಟಗೊಂಡು ಗೋದಾಮು ಕೇಂದ್ರದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಗೋದಾಮಿನಲ್ಲಿ ಶೇಕರಿಸಲಾಗಿದ್ದ 2. 20 ಲಕ್ಷ ಹೊಸ ಗೋಣಿ ಚೀಲ, ಸುಮಾರು 220 ಮೂಟೆ ರಾಗಿ ಬೆಂಕಿಗೆ ಭಸ್ಮವಾಗಿದೆ. ಸ್ಥಳದಲ್ಲಿಯೇ ಇದ್ದ ರೈತರು ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು,  ಸುಟ್ಟು ಹೋದ ಗೋಣಿಚೀಲವನ್ನು ಜೆಸಿಬಿ ಮೂಲಕ ಟ್ಯಾಕ್ಟರ್‌ಗೆ ತುಂಬಿ ಹೊರಹಾಕಿ ಉಳಿದ ಸಾವಿರಾರಯ ಮೂಟೆಯಲ್ಲಿದ್ದ ರಾಗಿ ರಕ್ಷಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ರಾಗಿ ಹಾಕಲು ತೆರಳಿದ ರೈತರು ತಮ್ಮ ಪ್ರಾಣವನ್ನು ಪಣಕಿಟ್ಟು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದರು, ರೈತರು ಸಲ್ಪ ಯಾಮಾರಿದ್ದರು ಸಾಕಷ್ಟು ರೈತರ ಪ್ರಾಣಹಾನಿ ಸಂಭವಿಸುತ್ತಿತ್ತು.  ಘಟನೆ ತಿಳಿದ ಕೂಡಲೇ ಆಹಾರ ಇಲಾಖೆ ಪ್ರಧಾನ ವ್ಯವಸ್ಥಾಪಕ ಬಸವರಾಜು ಬಿ. ಸೋಮಣ್ಣನವರ್, ಡಿಡಿ ರಮ್ಯ, ಜಿಎಂ. ತನ್ವೀರ್, ಪ್ರಶಾಂತ್  ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಆಹಾರ ಇಲಾಖೆಯ ಜನರಲ್ ಮ್ಯಾನೇಜರ್  ಬಸವರಾಜು ಬಿ. ಸೋಮಣ್ಣ ಮಾತನಾಡಿ, ಶಾರ್ಕ್ ಸಕ್ಯೂಟ್ ನಿಂದ ಅಗ್ನಿ ಅನಾಹುತವಾಗಿದ್ದು ನಮ್ಮ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸೇರಿಕೊಂಡು ಬೆಂಕಿ ನಂದಿಸಲಾಗಿದೆ, ಯಾವುದೇ ಅನಾಹುತ ಸಂಭವಿಸಿಲ್ಲ, ರೈತರಿಂದ ಎಂದಿನಂತೆ ರಾಗಿ ಖರೀದಿಸಲಾಗುವುದು, ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಮುಂದೆ ಈ ರೀತಿಯಾಗದಂತೆ ಮುಂಜಾಗೃತ ಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net