ಪ್ರಮುಖ ರಸ್ತೆಯಲ್ಲಿ ಸಂಚಾರ ಸಮಸ್ಯೆ

17 RMN-MGD P1
???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಪುರಸಭೆಯಿಂದ ಜಾಣ ಕುರುಡು

ಎಂ.ಎಸ್. ಸಿದ್ದಲಿಂಗೇಶ್ವರ ಮಾಗಡಿ

ನೀರಿನ ಪೈಪ್‌ಲೈನ್ ದುರಸ್ತಿಗೆ ತೋಡಿದ್ದ ಗುಂಡಿ ಮುಚ್ಚದೆ ಸಾರ್ವಜನಿಕರು ಓಡಾಡಲು ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಕರ್ನಾಟಕ ಬ್ಯಾಂಕ್ ಎದುರು ವಾರದ ಹಿಂದೆ ನೀರಿನ ಪೈಪ್‌ಲೈನ್ ದುರಸ್ತಿಗಾಗಿ ಗುಂಡಿ ತೆಗೆಯಲಾಗಿತ್ತು. ಪ್ರಮುಖ ಸಂಪರ್ಕ ರಸ್ತೆಯಲ್ಲಿ ಗುಂಡಿ ತೆಗೆದು ಮಣ್ಣನ್ನು ರಸ್ತೆಗೆ ಹಾಕಿರುವುದರಿಂದ ನಾರಸಿಂಹ ವೃತ್ತದಿಂದ ಕೆಂಪೇಗೌಡ ವೃತ್ತ, ತಿರುಮಲೆ ರಸ್ತೆಗೆ ಹೋಗಿ ಬರುವವರು ಈ ರಸ್ತೆ ಮೂಲಕವೇ ಸಂಚರಿಸಬೇಕಿದೆ. ಕರ್ನಾಟಕ ಬ್ಯಾಂಕ್ ಹಾಗೂ ಎಟಿಎಂಗೆ ಬರುವವರೂ ರಸ್ತೆಯಲ್ಲಿನ ಗುಂಡಿಯನ್ನು ದಾಟಿ ಬರಬೇಕಿದೆ. ಈ ವೇಳೆ ಸಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ದೇವಾಲಯ, ಪಡಿತರ ಸೊಸೈಟಿ, ಅಂಚೆ ಕಚೇರಿ, ಯೂನಿಯನ್ ಬ್ಯಾಂಕ್,, ಕಲ್ಯಾಣ ಮಂಟಪ, ಸರ್ಕಾರಿ ಕಚೇರಿ ಸೇರಿ ಶಾಲಾ, ಕಾಲೇಜುಗಳಿಗೆ ತೆರಳಲು ಈ ರಸ್ತೆ ಪ್ರಮುಖವಾಗಿದೆ. ರಸ್ತೆ ಬದಿಯಲ್ಲೇ ಮಣ್ಣಿನ ರಾಶಿ ಬಿದ್ದಿರುವುದರಿಂದ ಎದುರು ಬರುವ ವಾಹನಗಳು ಕಾಣದೆ ಅಪಘಾತಗಳಿಗೂ ಕಾರಣವಾಗುತ್ತಿದೆ. ಬ್ಯಾಂಕ್‌ಗೆ ಬರುವ ಗ್ರಾಹಕರು ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಪಾದಚಾರಿಗಳಿಗೂ ಓಡಾಡಲು ತೊಂದರೆಯಾಗಿದೆ ಎಂದು ಸ್ಥಳೀಯರು ಸಮಸ್ಯೆಯನ್ನು ತೆರೆದಿಟ್ಟಿದ್ದಾರೆ.

ನೀರಿನ ಪೈಪ್‌ಲೈನ್ ದುರಸ್ತಿಗಾಗಿ ಗುಂಡಿ ತೆಗೆಯುವ ವೇಳೆ ಇರುವ ಮುತುವರ್ಜಿ ಗುಂಡಿ ಮುಚ್ಚುವಾಗ ಇಲ್ಲದಿರುವುದು ಪುರಸಭೆ ಜಾಣ ಕುರುಡು ತೋರುತ್ತಿರುವುದಕ್ಕೆ ಹಿಡಿದ ಕನ್ನಡಿಯಂತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪುರಸಭೆ ಅಥವಾ ಯಾವುದೇ ಇಲಾಖೆಗಳು ರಸ್ತೆ ಬಳಿ ಕಾಮಗಾರಿ ಕೈಗೊಳ್ಳುವ ಮುನ್ನ ಸಾರ್ವಜನಿಕರ ಹಿತ ಕಾಪಾಡುವುದು ಮುಖ್ಯ ಹಾಗೂ  ಕಾಮಗಾರಿ ಪ್ರಗತಿಯಲ್ಲಿದೆ ಎಚ್ಚರಿಕೆಯಿಂದ ವಾಹನ ಚಲಾಯಿಸಿ ಎಂಬ ಸೂಚನಾ ಲಕವನ್ನು ಅಳವಡಿಸಿಲ್ಲ.  ಸಾವು ನೋವು ಸಂಭವಿಸಿದರೆ ಪುರಸಭೆಯೇ ಹೊಣೆಯಾಗಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

ನೀರಿನ ಪೈಪ್‌ಲೈನ್ ದುರಸ್ತಿಪಡಿಸಿ ತುರ್ತಾಗಿ ಗುಂಡಿ ಮುಚ್ಚುವಂತೆ ಇಂಜಿನಿಯರ್‌ಗೆ ಸೂಚಿಸಲಾಗಿದೆ. ತಕ್ಷಣವೇ ಸಮಸ್ಯೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.

 ಶಿವರುದ್ರಯ್ಯ, ಪುರಸಭೆ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net