ಮಣ್ಣು ತೆರವುಗೊಳಿಸಿ ಕಿರಿಕಿರಿ ದೂರ ಮಾಡಿ ರಸ್ತೆ ಸೇರಿದ ಚರಂಡಿ ಮಣ್ಣು

13 RMN-MGD P2
?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಎಂ.ಎಸ್. ಸಿದ್ದಲಿಂಗೇಶ್ವರ ಮಾಗಡಿ

ಚರಂಡಿ ಸ್ವಚ್ಛಗೊಳಿಸಲು ತೆಗೆದ ಮಣ್ಣನ್ನು ರಸ್ತೆಗೆ ಹಾಕಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಪಟ್ಟಣದ ಅಂಚೆಕಚೇರಿ ಎದುರು ಚರಂಡಿಯಲ್ಲಿ ಮಣ್ಣು ತುಂಬಿ ಮಳೆ ಬಂದರೆ ನೀರು ರಸ್ತೆಗೆ ಹರಿಯುತ್ತಿತ್ತು. ವಾರದ ಹಿಂದೆ ಪುರಸಭೆಯವರು ಚರಂಡಿ ಸ್ವಚ್ಛತಾ ಕಾರ್ಯ ನಡೆಸಿ ಚರಂಡಿಯಲ್ಲಿ ತುಂಬಿದ್ದ ಮಣ್ಣನ್ನು ತೆಗೆದು ರಸ್ತೆಗೆ ಸುರಿದು ಚರಂಡಿಯನ್ನು ಮುಚ್ಚದೆ ಹಾಗೆ ಬಿಟ್ಟಿದ್ದಾರೆ. ಇದರಿಂದ ಪ್ರಮುಖ ರಸ್ತೆಯಲ್ಲಿ ಸಾರ್ವಜನಿಕರು, ವಾಹನ ಸವಾರರಿಗೆ ಓಡಾಡಲು ತೊಂದರೆಯಾಗುತ್ತಿದೆ.

ಅಂಚೆ ಕಚೇರಿಗೆ ತೆರಳಲು ತೆರೆದ ಚರಂಡಿಗೆ ಅಡ್ಡಲಾಗಿ ಕಲ್ಲುಚಪ್ಪಡಿ ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಅಂಚೆ ಕಚೇರಿಗೆ ನೂರಾರು ಮಂದಿ ಬಂದು ಹೋಗುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಚರಂಡಿಗೆ ಬೀಳುವುದು ನಿಶ್ಚಿತ. ಇದಲ್ಲದೆ ಕಚೇರಿಯ ಹಿಂಭಾಗದಲ್ಲಿ ನ್ಯಾಯಬೆಲೆ ಅಂಗಡಿಯ ಗೋದಾಮಿ ಇದ್ದು, ಸಾರ್ವಜನಿಕರು ಪಡಿತರ ಪಡೆಯಲು ಇದೇ ಕಲ್ಲು ಚಪ್ಪಡಿಯ ಮೇಲೆ ಸಂಚರಿಸಬೇಕಿದೆ. ಅಕ್ಕಿಯನ್ನು ಹೊತ್ತು ಒಯ್ಯುವ ವೇಳೆ ಕಾಲು ಜಾರಿದರೆ ಅಪಾಯ ತಪ್ಪಿದ್ದಲ್ಲ ಎಂದು ನಾಗರಿಕರು ದೂರಿದ್ದಾರೆ.

ಪುರಸಭೆಯವರು ಕೂಡಲೇ ಚರಂಡಿ ಮೇಲೆ ಸ್ಲ್ಯಾಬ್ ಅಳವಡಿಸಿ ರಸ್ತೆಯಲ್ಲಿನ ಮಣ್ಣಿನ ರಾಶಿ ತೆರವುಗೊಳಿಸಿ ಅನುಕೂಲ ಕಲ್ಪಿಸುವಂತೆ ನಾಗರಿಕರು ಮನವಿ ಮಾಡಿದ್ದಾರೆ.

ಚರಂಡಿ ತೆಗೆದು ರಸ್ತೆಯ ಮಣ್ಣು ಮೇಲೆ ಹಾಕಿರುವುದರಿಂದ ದ್ವಿಚಕ್ರ ವಾಹನಗಳು ಓಡಾಡುವುದು ಇರಲಿ ಪಾದಚಾರಿಗಳೂ ಓಡಾಡಲು ಸಾಧ್ಯವಾಗುತ್ತಿಲ್ಲ. ಮಳೆ ಬಂದರೆ ಜಾರಿ ಬೀಳುವಂತಾಗಿದೆ.

ರಂಜು, ಸ್ಥಳಿಯ

ಚರಂಡಿಗೆ ಸ್ಲ್ಯಾಬ್ ಅಳವಡಿಸುವ ಕಾಮಗಾರಿ ಪೂರ್ಣಗೊಳಿಸಲು ವಿಳಂಬವಾಗುತ್ತಿದೆ. ತಕ್ಷಣವೇ ರಸ್ತೆಯ ಮೇಲೆ ಹಾಕಿರುವ ಮಣ್ಣನ್ನು ತೆರವುಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಲಾಗುವುದು.

ಕುಸುಮ, ಆರೋಗ್ಯಾಧಿಕಾರಿ, ಪುರಸಭೆ

ಎರಡು ದಿನಗಳ ಹಿಂದೆ ಮುಖ್ಯಾಧಿಕಾರಿಯಾಗಿ ನೇಮಕವಾಗಿದ್ದೇನೆ. ಈ ಬಗ್ಗೆ ಗಮನಕ್ಕೆ ಬಂದಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪೂರ್ಣಗೊಳಿಸಲಾಗುವುದು.

ಶಿವರುದ್ರಯ್ಯ, ಮುಖ್ಯಾಧಿಕಾರಿ, ಪುರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net