

ಮಾಗಡಿ: ತೋಟದ ತಂತಿ ಬೇಲಿಯ ಉರುಳಿಗೆ ಸಿಲುಕಿ ಚಿರತೆ ಸಾವನ್ನಪಿರುವ ಘಟನೆ ನಡೆದಿದೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ತಿಪ್ಪಸಂದ್ರ ಹೋಬಳಿ ಬಿಸ್ಕೂರು ಗ್ರಾಮದ ರಾಮಯ್ಯ ಎಂಬುವರು ಕಾಡುಹಂದಿ ದಾಳಿ ತಡೆಗಟ್ಟು ಉದ್ದೇಶದಿಂದ ತಮ್ಮ ಜಮೀನಿಗೆ ತಂತಿ ಬೇಲಿ ಅಳವಡಿಸಿದ್ದರು ಇದಕ್ಕೆ 5 ವರ್ಷದ ಗಂಡು ಚಿರತೆ ಸಿಲುಕಿ ಭಾನುವಾರ ಸಾವನ್ನಪಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ವಿಷಯ ತಿಳಿದ ಮಾಗಡಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಮೃತ ಚಿರತೆಯ ಮರಣೊತ್ತರ ಪರೀಕ್ಷೆ ನಡೆಸಿ ಬಿಸ್ಕೂರು ಪಾರೆಸ್ಟ್ ಬಳಿ ಅಂತ್ಯಕ್ರಿಯೆ ನಡೆಸಿದ್ದಾರೆ. ಕುದೂರು ಪಶು ವೈದ್ಯೆ ಕಾವ್ಯ ಮರಣೊತ್ತರ ಪರೀಕ್ಷೆ ನಡೆಸಿದ್ದಾರೆ. ಅರಣ್ಯ ಅಧಿಕಾರಿ ಆಂಜನಮೂರ್ತಿ ಹಾಗೂ ಸಿಬ್ಬಂದಿ ಸ್ಥಳದಲ್ಲಿ ಇದ್ದರು.