

ಮಾಗಡಿ
ದೇಶದ ಜನರು ಕುಡಿಯುವ ನೀರಿನಿಂದ ವಂಚಿತರಾಗಬಾರದು ಎಂಬುದು ಜಲ ಜೀವನ್ ಮಿಷನ್ ಯೋಜನೆಯ ಉದ್ದೇಶ ಎಂದು ಕೇಂದ್ರ ಸರ್ಕಾರದ ರೀಡ್ ಸಂಸ್ಥೆಯ ಅರುಳಪ್ಪ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಗ್ರಾಮೀಣ ಸ್ವಚ್ಛ ಭಾರತ ಮಿಷನ್ ಹಾಗೂ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನ ಸಭೆಯಲ್ಲಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೊಳಿಸಿರುವ ಜೆಎಂಎಂ ಯೋಜನೆಯಿಂದ ಗ್ರಾಮೀಣ ಪ್ರದೇಶದ ಪ್ರತಿ ಮನೆ, ಮನೆಗೆ ನದಿ ನೀರು ಒದಗಿಸಲಾಗುತ್ತಿದೆ. ಜನರು ನೀರು ಪೋಲು ಮಾಡದೆ, ಮಿತವಾಗಿ ಬಳಸುವಂತೆ ನಮ್ಮ ಸಂಸ್ಥೆಯಿಂದ ನಾಗರಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಈ ಯೋಜನೆಗೆ ಶೇ.45ರಷ್ಟು ರಾಜ್ಯ ಸರ್ಕಾರ, 45ರಷ್ಟು ಕೇಂದ್ರ ಸರ್ಕಾರ ಹಾಗೂ ಸ್ಥಳಿಯ ಗ್ರಾಪಂ ಶೇ.10ರಷ್ಟು ಕ್ರೂಢಿಕರಿಸಿದ್ದು, ಶೇ.100ರಷ್ಟು ಅನುದಾನದಿಂದ ಕಾರ್ಯಕ್ರಮ ರೂಪಿಸಲಾಗಿದೆ. ಗ್ರಾಪಂ ಕುಡಿಯುವ ನೀರು ಹಾಗೂ ಗ್ರಾಮ ನೈರ್ಮಲ್ಯ ಸಮಿತಿಯಲ್ಲಿ ಗ್ರಾಪಂ ಅಧ್ಯಕ್ಷರು, ಪಿಡಿಒ, ಅಂಗನವಾಡಿ ಕಾಯಕರ್ತೆಯರು ಇರಲಿದ್ದಾರೆ. ಸಮಿತಿಯ ಸದಸ್ಯರಿಗೆ ತರಬೇತಿ ಕೊಡಲಾಗುವುದು, 7 ಪ್ಯಾರ ಮೀಟರ್‌ನಲ್ಲಿ ಪರೀಕ್ಷೆ ಮಾಡಿ, ನೀರು ಕೊಡಲು ಪ್ರತಿ ಗ್ರಾಪಂಗೆ ಕಿಟ್ ವಿತರಿಸಲಾಗಿದೆ. ತಾಲೂಕು ಮಟ್ಟದಲ್ಲಿ ಎರಡು ಕಡೆ ವಸ್ತು ಪ್ರದರ್ಶನದ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಸಂಸ್ಥೆಯ ಹರೀಶ್, ಗೋಪಾಲ್, ಲೋಕೇಶ್, ಚೇತನ್, ವೀಣಾ ಇದ್ದರು.