ವರ್ಷದೊಳಗೆ ಪದವಿ ಕಾಲೇಜಿಗೆ ಸಭಾಂಗಣ ಶಾಸಕ ಬಾಲಕೃಷ್ಣ ಭರವಸೆ

24 RMN-MGD P01
Published on

 ಮಾಗಡಿ

ಇನ್ನೊಂದು ವರ್ಷದೊಳಗೆ ಪಟ್ಟಣದ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿ ಸಭೆ, ಸಮಾರಂಭ ನಡೆಸಲು ಸಭಾಂಗಣ ನಿರ್ಮಿಸಿಕೊಡುವುದಾಗಿ ಶಾಸಕ ಎಚ್​.ಸಿ. ಬಾಲಕೃಷ್ಣ ಭರವಸೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸತಿಕ, ಕ್ರೀಡಾ, ಸ್ಕೌಟ್ಸ್​, ಗೈಡ್ಸ್​ ಇತರ ಟಕಗಳ ಸಮಾರೋಪ ಹಾಗೂ ಕಾಲೇಜು ವಾರ್ಷಿಕೋತ್ಸವವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಲಾಲ್​ ಬಹದ್ದೂರ್​ ಶಾಸ್ಸ್ರಿ ಅವರ ಪ್ರಾಮಾಣಿಕತೆ ಇಂದಿನ ರಾಜಕಾರಣಿಗಳಲ್ಲಿ ಕಾಣಲು ಸಾಧ್ಯವಿಲ್ಲ. ಅವರ ಆದರ್ಶಗಳು ಇಂದಿನ ಯುವಕರಿಗೆ ಸ್ಫೂರ್ತಿಯಾಗಬೇಕು. ರೈತರು ಮತ್ತು ಯೋಧರು ಈ ದೇಶದ ರಕ್ಷಕರು. ರೈತರು ಅನ್ನದಾತರಾದರೆ ಯೋಧರು ದೇಶದ ರಕ್ಷಕರು. ಅದಕ್ಕಾಗಿ ನಮ್ಮ ದೇಶಕ್ಕೆ ಗೌರವವಿದೆ ಎಂದರು.

ದೇಶದ ಭವಿಷ್ಯ  ಉತ್ತಮವಾಗಬೇಕಾದರೆ ಭವಿಷ್ಯದ ಪ್ರಜೆಗಳು ದಿಕ್ಕು ತಪ್ಪಬಾರದು. ಕಾಲೇಜಿಗೆ ಮೂಲಭೂಸೌಕರ್ಯ ಒದಗಿಸಲು ಬದ್ಧನಿದ್ದೇನೆ. ಮಕ್ಕಳ ಭವಿಷ್ಯ ರೂಪಿಸುವ ಗುರುತರ ಜವಾಬ್ದಾರಿ ನನ್ನ ಮೇಲಿದೆ. ಇದರಿಂದಾಗಿ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ 2 ಲಕ್ಷರೂ. ದೇಣಿಗೆ ನೀಡುವುದಾಗಿ ಶಾಸಕರು ಘೋಷಿಸಿದರು.

ಪ್ರಶಸ್ತಿ ಗಳಿಸಬೇಕು ಎಂಬ ಛಲ ವಿದ್ಯಾರ್ಥಿಗಳಲ್ಲಿ ಇರಬೇಕು. ಉತ್ತಮ ಪ್ರಜೆಯ ಆಲೊಚನೆ ಇರಲಿ. ಈ ಕಾಲೇಜಿನಲ್ಲಿ ಮಧ್ಯಮ ಕೆಳವರ್ಗದ ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಹಾಗಾಗಿ ಅವರಿಗೆ ಅವರಿಗೆ ಅಗತ್ಯವಾದ ಎಲ್ಲ ಸೌಲಭ್ಯ ಒದಗಿಸಲು ಶ್ರಮಿಸುವುದಾಗಿ ಬಾಲಕೃಷ್ಣ ತಿಳಿಸಿದರು.

ಹಿಂದಿನ ಹಾಗೂ ಪ್ರಸ್ತುತ ರಾಜಕಾರಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇಂದು ರಾಜಕೀಯ ಮಾಡಲು ಬ್ಯಾಂಕ್​ನಲ್ಲಿ ಹಣ ಇದೆಯಾ ಎನ್ನುತ್ತಾರೆ. ಲಾಲ್​ ಬಹಾದ್ದೂರ್​ ಶಾಸ್ತ್ರಿ ಅವರಂತೆ ಸಾಧನೆ ಮಾಡಿದಾಗ ದೇಶದ ಗೌರವ ಉಳಿಯುತ್ತದೆ. ವಿದ್ಯಾರ್ಥಿಗಳು ಚಂಚಲ ಮನಸ್ಸು ಬಿಟ್ಟು ಸಾಧನೆ ಮಾಡಿ ದೇಶದ ಅಭಿವೃದ್ಧಿಗೆ ಮುಂದಾಗಿ. ಮುಂದಿನ ಜೀವನ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

ವಿಶ್ರಾಂತ ಕುಲಪತಿ ಸುಂದರರಾಜು ಮಾತನಾಡಿ. ಬೇರೆಯವರ ಮುಖದಲ್ಲಿ ನಗು ತರುವಂತಹ ಭಾವನೆಗಳು ವಿದ್ಯಾರ್ಥಿಗಳಿಂದ ವ್ಯಕ್ತವಾಗಬೇಕು. ಅದು ನಿಜವಾದ ಮನುಷ್ಯ ಧರ್ಮ. ಬಡತನ ಶಾಪವಲ್ಲ ವರ. ಸಂಪತ್ತು ಅಪತ್ತಿಗೆ ಕಾರಣ, ಬಡತನ ಪ್ರೀತಿ, ವಿಶ್ವಾಸಕ್ಕೆ ಪೂರಕವಾಗಿರುತ್ತದೆ. ತಂದೆ, ತಾಯಿ ಬಡವರಾದರೂ ವಿದ್ಯಾರ್ಥಿಗಳ ಮೇಲಿನ ಪ್ರೀತಿ ಕಡಿಮೆಯಾಗುವುದಿಲ್ಲ. ತಾಯಿಯೊಂದಿಗೆ ಮಾತನಾಡುವಾಗ ಮಮತೆಯಿಂದ ಮಾತನಾಡಬೇಕು, ತಂದೆಯೊಂದಿಗೆ ಗೌರವ, ಅಧ್ಯಾಪಕರೊಂದಿಗೆ ವಿನಯದಿಂದ, ಸ್ನೇಹಿತರ ಜತೆ ಸಹೋದರತ್ವ ಇರಬೇಕು. ದೇವರ ಜತೆ ಮಾತನಾಡುವಾಗ ಮೌನವಾಗಿರಬೇಕು ಎಂದರು.

ಬ್ರೆಜಿಲ್​ ದೇಶ ಕ್ರೀಡಾಪಟುಗಳು ದೇಶದ ಆಸ್ತಿ ಎಂದು ಘೋಷಿಸಿದೆ. ಆದರೆ ನಮ್ಮಲ್ಲಿ ಹರಾಜು ಮಾಡಿಕೊಳ್ಳುತ್ತಿದ್ದೇವೆ. ಶಿಕ್ಷಣ ಏರ್​ಕಂಡೀಷನ್​ ರೂಂ ಆಗಿದೆ. ಸರ್ಕಾರಿ ಕಾಲೇಜಿನಲ್ಲಿ ಮಾತ್ರ ಶಿಕ್ಷಣ ಉಳಿದಿದೆ. ಸಮಾಜಕ್ಕೆ ಬೇಕಾದ ಮನುಷ್ಯ ಗುಣ, ಜ್ಞಾನ ನೀಡುವ ಗುಣ ಮರೆಯಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net