

ಮಾಗಡಿ:
ಪಟ್ಟಣದಲ್ಲಿ ಒಂಟಿ ಸಲಗ ಪ್ರತ್ಯಕ್ಷದಿಂದಾಗಿ ನಾಗರೀಕರು ಭಯಬೀತರಾಗಿದ್ದರಾರೆ.
ತಾಲೋಕಿನ ಬೆಳಗುಂಬ ಬೆಟ್ಟದಲ್ಲಿ ಗುರುವಾರ ರಾತ್ರಿ ಕಾಣಿಸಿಕೊಂಡ ಒಂಟಿ ಸಲಗ ನಂತರ ಪಟ್ಟಣದ ಜೂನಿಯರ್ ಕಾಲೇಜಿನ ಬಳಿ ತಡರಾತ್ರಿ 2-30 ರ ವೇಳೆ ಕಾಣಿಸಿಕೊಂಡು ಕಾಲೇಜಿನ ಕಬ್ಬಿಣದ ಗೇಟ್ ಮುರಿದು ಶ್ರೀರಂಗನಾಥ ಸ್ವಾಮಿ ದೇವಾಲ ಸುತ್ತಮುತ್ತಲು ಪ್ರತ್ಯಕ್ಷವಾಗಿದೆ.
ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಅಟ್ಟಲು ಹರಸಾಹಸ ಪಡುತ್ತಿದ್ದಾರೆ. ಸದಸ್ಯ ಒಂಟಿ ಸಲಗ ಹೊಸಹಳ್ಳಿ ಗ್ರಾಮದ ಬಳಿಪ್ರತ್ಯಕ್ಷವಾಗಿದ್ದು ಬಿಡದಿ ಕಡೆಯಿಂದ ಬಂದಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ವಷ್ಟ ಪಡಿಸಿದ್ದು ಕಳೆದ ಎರಡು ತಿಂಗಳ ಹಿಂದೆ ಇದೇ ಒಂಟಿ ಸಲಗ ಕೆಂಪಸಾಗರ ಸುತ್ತ ಮುತ್ತಲ ಗ್ರಾಮಗಳ ಬಳಿ ಪ್ರತ್ಯಕ್ಷವಾಗಿತ್ತು ಈವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಒಂಟಿ ಸಲಗವನ್ನು ಕಾಡಿಗೆ ಓಡಿಸಿದ್ದರು.