ಕೊಟ್ಟಿಗೆಯಲ್ಲಿದ್ದ 4 ಹಸು, 1 ಕರು ಕಳವು

cow
Published on
  • ಗೋ ಅವಶೇಷ ಗ್ರಾಮದ ಹೊರಭಾಗದಲ್ಲಿ ಎಸೆದ ಖದೀಮರು

ಮಾಗಡಿ
ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ 4 ಹಸು, 1 ಕರುವನ್ನು ಗುರುವಾರ ರಾತ್ರಿ ಕಳವು ಮಾಡಿರುವ ದುಷ್ಕರ್ಮಿಗಳು ಗೋಮಾಂಸ ತೆಗೆದು, ಅವಶೇಷವನ್ನು ಗ್ರಾಮದ ಹೊರಭಾಗದಲ್ಲಿ ಎಸೆದು ಹೋಗಿದ್ದಾರೆ.

ತಾಲೂಕಿನ ಬಗಿನಗೆರೆ ಗ್ರಾಮದ ರೈತ ರಾಮಯ್ಯ ಎಂಬುವವರ 1 ಕರು, 4 ಹಸುಗಳನ್ನು ಮನೆ ಸಮೀಪದ ಕೊಟ್ಟಿಗೆಯಿಂದ ಕದ್ದೊಯ್ದ ಚಿಗಳೂರು ರಸ್ತೆಯ ರೈಲ್ವೆ ಸೇತುವೆ ಬಳಿ ಹಸು ಕೃತ್ಯ ನಡೆಸಿದ್ದಾರೆ.

ಶುಕ್ರವಾರ ಬೆಳಗ್ಗೆ ರೈತ ರಾಮಯ್ಯ ಅವರು ಕೊಟ್ಟಿಗೆ ಬಳಿ ಬಂದಾಗ ಕೃತ್ಯ ತಿಳಿದು ಬಂದಿದೆ. ಈ ಬಗ್ಗೆ ರಾಮಯ್ಯ ಕುದೂರು ಠಾಣೆಯಲ್ಲಿ ದೂರು ಸಲ್ಲಿಸಲು ತೆರಳುವ ವೇಳೆ, ಗ್ರಾಮದ ಹೊರಭಾಗದಲ್ಲಿ ಹಸು ಕತ್ತರಿಸಿರುವ ಬಗ್ಗೆಯೂ ತಿಳಿದಿದು ಬಂದಿದೆ.

ಇದರಿಂದ ರೈತನಿಗೆ 2 ಲಕ್ಷ ರೂ.ಗೂ ಅಧಿಕ ನಷ್ಟ ಉಂಟಾಗಿದ್ದು, ತಾಲೂಕು ಆಡಳಿತ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದೆ.

ತಾಲೂಕಿನ ಹಲವೆಡೆಗಳಲ್ಲಿ ರೈತರು ಸಾಕಿರುವ ಹಸು, ಕರುಗಳ ಕಳ್ಳತನ ನಡೆಯುತ್ತಿದ್ದು, ಕಳ್ಳರನ್ನು ಬಂಧಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯಸುತ್ತಿರುವುದರಿಂದ ರೈತರು ಹಸು, ಕರುಗಳನ್ನು ಸಾಕಲು ಹಿಂದೇಟು ಹಾಕುವಂತಾಗಿದೆ. ಇದೇ ರೀತಿ ಮುಂದುವರಿದರೆ ಸಂಬಂಧಪಟ್ಟ ಇಲಾಖೆ ಮುಂಭಾಗ ಪ್ರತಿಭಟನೆ ನಡೆಸಲಾಗುವುದು.
 ಗೋವಿಂದರಾಜು, ತಾಲೂಕು ರೈತ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net