ದೇಶಕ್ಕೆ ರೈತರ ಅಗತ್ಯ ಹೆಚ್ಚಿದೆ ಮಾಜಿ ಉಪ ಮಹಾಪೌರ ಬಿ.ಎಸ್.ಪುಟ್ಟರಾಜು ಅಭಿಮತ

20-07-rama-byalakere
Published on

ಮಾಗಡಿ ತಾಲೂಕಿನ ಬ್ಯಾಲಕೆರೆ ಸಾಂಸ್ಕೃತಿ ಪ್ರತಿಷ್ಠಾನದ 8ನೇ ವಾರ್ಷಿಕೋತ್ಸವ ಕಾರ್ಯಕ್ರಮ



ರಾಮನಗರ: ನಮ್ಮ ದೇಶಕ್ಕೆ ಇಂದಿನ ಪರಿಸ್ಥಿತಿಯಲ್ಲಿ ರೈತರ ಕೊಡುಗೆ ಹೆಚ್ಚಾಗಿ ಬೇಕಾಗಿದೆ ಎಂದು ರೈತರು ಹೆಚ್ಚು ಹೆಚ್ಚು ಬಿಬಿಎಂಪಿ ಮಾಜಿ ಉಪ ಮಹಾಪೌರ ಬಿ.ಎಸ್.ಪುಟ್ಟರಾಜು ಹೇಳಿದರು.

ಬೆಂಗಳೂರಿನ ಅನಂತಕುಮಾರ್ ಸಭಾಂಗಣದಲ್ಲಿ ಮಾಗಡಿ ತಾಲೂಕಿನ ಬ್ಯಾಲಕೆರೆ ಸಾಂಸ್ಕೃತಿ ಪ್ರತಿಷ್ಠಾನದ 8ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದು ಎಲ್ಲರೂ ಎದ್ದನಂತರ ಮೊಬೈಲ್ ಕೈಯಲ್ಲಿ ಹಿಡಿದರೆ ಮುಗಿಯಿತು, ಮಲಗುವ ಮುನ್ನವಷ್ಟೇ ಅದನ್ನು ಪಕ್ಕಕ್ಕೆ ಇಡುತ್ತಾರೆ. ಆದರೆ ಇಂದು ಸಾವಯವ ಕೃಷಿಯ ಅಗತ್ಯವಿದೆ. ಇದನ್ನು ಸಾಧಿಸುವ ಎಲ್ಲರಿಗೂ ಆರೋಗ್ಯಕರವಾದ ಆಹಾರ ಕೊಡುವ ಶಕ್ತಿ ಇರುವುದು ರೈತರಿಗೆ ಮಾತ್ರ. ಈ ನಿಟ್ಟಿನಲ್ಲಿ ರೈತರು ಈ ದೇಶದ ಅಭಿವೃದ್ಧಿಗೆ ಹೆಚ್ಚು ಹೆಚ್ಚು ಕೊಡುಗೆಯನ್ನು ನೀಡಬೇಕು ಎಂದು ಮನವಿ ಮಾಡಿದರು.

ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಶಾಂತಕುಮಾರಿ ಮಾತನಾಡಿ, ರೈತರಿಗೆ ಪ್ರೋತ್ಸಾಹ ನೀಡಿದಾಗ ಮಾತ್ರ ಈ ದೇಶ ಅಭಿವೃದ್ಧಿ ಕಾಣಲು ಸಾಧ್ಯ. ಸಾವಯವ ಕೃಷಿ ಅಗತ್ಯವಾಗಿದ್ದು, ಅದೇ ರೀತಿ ಕೃಷಿಯಲ್ಲಿ ಬದಲಾವಣೆ ತರುವ ಮೂಲಕ ಆಹಾರ ಧಾನ್ಯದ ಕೊರತೆಯನ್ನು ನೀಗಿಸಬೇಕು ಎಂದರು.

ಇದೇ ವೇಳೆ ಉಪನ್ಯಾಸಕ ಪ್ರೊ.ಶಿವಕುಮಾರ್, ಪ್ರತಿಷ್ಠಾನದ ಅಧ್ಯಕ್ಷ ಜಯಣ್ಣ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಗೆ ವಿದ್ಯಾರ್ಥಿಗಳು, ಗವಿನಾಗಮಂಗಲದ ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ರೈತ ರಾಮಚಂದ್ರಯ್ಯ ಅವರನ್ನು ಸನ್ಮಾನಿಸಲಾಯಿತು.

ಪ್ರತಿಷ್ಠಾನದ ಜ್ಯೋತಿ, ಡಾ.ಚಂದ್ರಪ್ಪ, ನಟರಾಜು ಬ್ಯಾಲಕೆರೆ, ರಾಜಶೇಖರ್, ಉಮಾಶಂಕರ್ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net