ಅಪಘಾತ ಬೈಕ್ ಸವಾರರ ಸಾವು

accident-15
Published on

ಮಾಗಡಿ. ದ್ವಿಚಕ್ರವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಸವಾರಿಬ್ಬರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಮಾಗಡಿ ಪೊಲೀಸ್‌ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ.

ಪಟ್ಟಣದ ರಾಜೀವ್ ಗಾಂಧಿ ನಗರ ನಿವಾಸಿ ಪ್ರಶಾಂತ್ (22). ರಾಜು (45) ಮೃತಪಟ್ಟ ದುರ್ದೈವಿಗಳು, ಬೈಕ್ ಸವಾರರು ಮಾಗಡಿ ಪಟ್ಟಣಕ್ಕೆ ತಮ್ಮ ಬೈಕ್ ನಲ್ಲಿ ಬಲಕ್ಕೆ ತಿರುಗುವ ವೇಳೆ ಮಾಗಡಿ ಯಿಂದ ಕುಣಿಗಲ್ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ಪ್ರಶಾಂತ್ ಹಾಗೂ ರಾಜು ಚಿಕಪ್ಪ,ದೊಡ್ಡಪ್ಪನ ಮಕ್ಕಳಾಗಿದ್ದು ಇಬ್ಬರು ಪಟ್ಟಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ರಾಜು ಎಂಬುವರಿಗೆ ಇಬ್ಬರು ಗಂಡು ಇಬ್ಬರು ಹೆಣ್ಣು ಮಕ್ಕಳು ಪತ್ನಿಯನ್ನು ಅಗಲಿದ್ದಾರೆ, ಪ್ರಶಾಂತ್ ಗೆ ಅವಿವಾಹಿತ.

ವಿಷಯ ತಿಳಿದ ಮಾಗಡಿ ಪೋಲೀಸರು ಸ್ಥಳಕ್ಜೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಾಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net