ಅಭ್ಯಾಸದಿಂದ ಸಾಧನೆ ಸಾಧ್ಯ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

1 RMN-MGD P01
Published on

 ಮಾಗಡಿ
ಪಟ್ಟಣದಲ್ಲಿ ಮೆಡಿಕಲ್​ ಹಾಗೂ ಇಂಜಿನಿಯರಿಂಗ್​ ಕಾಲೇಜು ಆರಂಭಿಸಲು ಚಿಂತಿಸಲಾಗಿದೆ ಎಂದು ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಬಿಜಿಎಸ್​ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರು, ಮೈಸೂರು, ಮಂಗಳೂರಿಗೆ ತೆರಳುತ್ತಿದ್ದಾರೆ. ಇದರಿಂದ ಪಾಲಕರಿಗೆ ಹೆಚ್ಚು ಹೊರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಮಾಗಡಿ ಭಾಗದಲ್ಲಿ ಕಾಲೇಜು ಆರಂಭಿಸಲು ಚಿಂತಿಸಲಾಗಿದೆ ಎಂದರು.
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನೀಟ್​, ಸಿಇಟಿ ತರಬೇತಿ ಅಗತ್ಯವಾಗಿದ್ದು, ಬಿಜಿಎಸ್​ ಕಾಲೇಜಿನಲ್ಲಿ ನುರಿತ ಶಿಕ್ಷಕರ ವೃಂದವಿದ್ದು ಇದರಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪ್ರತಿವರ್ಷ ಪಿಯುಸಿ ಪರೀೆಯಲ್ಲಿ 100ಕ್ಕೆ 100 ಫಲಿತಾಂಶ ಬರುತ್ತಿದೆ. ಈ ಕಾಲೇಜಿನಲ್ಲಿ ಸೀಟು ಪಡೆಯಲು ಪೈಪೋಟಿ ಉಂಟಾಗಿದೆ. ಓದಿನ ವಿಧಾನಗಳೇ ಬೇರೆಯಾಗಿದ್ದು, ಇದಕ್ಕೆ ವಿದ್ಯಾರ್ಥಿಗಳಲ್ಲಿ ಟಾರ್ಗೆಟ್​ ಎಂಬುದು ಇರಬೇಕು ಎಂದರು.
ಎಸ್ಸೆಸ್ಸೆಲ್ಸಿ ನಂತರ ವಿದ್ಯಾರ್ಥಿಗಳಿಗೆ ವಿದ್ಯೆ ಎಂಬುದು ಮಳೆ ಬೀಳುವ ಸಂಭವ ಇದ್ದಂತೆ, ಈ ವೇಳೆ ಬೀಳುವ ಮಳೆಯ ನೀರನ್ನು ಸಂಗ್ರಹಿಸುವಂತೆ ವಿದ್ಯೆಯನ್ನು ಕೂಡಿಟ್ಟುಕೊಳ್ಳಿ ಎಂದರು.
ಬಿಜಿಎಸ್​ ಶಿಕ್ಷಣ ಸಂಸ್ಥೆ ನಿರ್ದೇಶಕ ಡಾ.ನವೀನ್​ ಕುಮಾರ್​ ಮಾತನಾಡಿ, ವಿದ್ಯಾರ್ಥಿಗಳು 30 ವರ್ಷದವರೆಗೆ ವಿದ್ಯಾಭ್ಯಾಸದ ಕಡೆ ಹೆಚ್ಚು ಕಾಳಜಿ ವಹಿಸಬೇಕು. ಗ್ರಾಮೀಣ ವಿದ್ಯಾಥಿಗಳಿಗೆ ಈ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಜೀವನದ ಮೌಲ್ಯ, ದೂರದೃಷ್ಟಿ ಇಟ್ಟುಕೊಂಡು ವಿದ್ಯಾಭ್ಯಾಸದ ಕಡೆ ಗಮನವಿಡಬೇಕು. ತಂದೆ&ತಾಯಿ ಒತ್ತಡಕ್ಕೆ ಓದುವುದನ್ನು ಬಿಟ್ಟು ಜೀವನದಲ್ಲಿ ಗುರಿ ಸಾಧಿಸಲು ವಿದ್ಯಾಭ್ಯಾಸ ಮಾಡಿ ಎಂದರು.
ಒಕ್ಕಲಿಗರ ಸಂದ ನಿರ್ದೇಶಕ ಎಚ್​.ಎನ್​.ಅಶೋಕ್​ ಮಾತನಾಡಿ, ಸಾವಿರಾರು ವರ್ಷಗಳಿಂದ ಮಠ ಮಾನ್ಯಗಳು ದೇಶಾದ್ಯಂತ ಶೈಕ್ಷಣಿಕ ೇತ್ರ ಬಲಪಡಿಸುತ್ತಿವೆ. ಸರ್ಕಾರಗಳು ಶಿಕ್ಷಣಕ್ಕೆ ನೀಡಬೇಕಾದ ಆದ್ಯತೆ ನೀಡಲು ಒದ್ದಾಡುವ ವೇಳೆ ಮಠ&ಮಾನ್ಯಗಳು ಶೈಕ್ಷಣಿಕ ೇತ್ರ ಬಲಪಡಿಸಿವೆ. ಅದರಲ್ಲಿ ಆದಿಚುಂಚನಗಿರಿ ಮಠ ಶಿಕ್ಷಣ ೇತ್ರದಲ್ಲಿ ನೂರಾರು ವರ್ಷದಿಂದ ದೊಡ್ಡ ಪರಂಪರೆ ಹೊಂದಿದ್ದು, ವಿದ್ಯಾರ್ಥಿಗಳನ್ನು ಭಾರತಕ್ಕೆ ಕೊಡುಗೆ ನೀಡಿರುವ ಸಾಲಿನಲ್ಲಿ ಮುಂದೆ ನಿಂತಿದೆ ಎಂದರು.
ಸಾಂಸತಿಕ ಕಾರ್ಯಕ್ರಮಗಳು ಹಾಗೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ವಿಜಯನಗರ ಮಠದ ಸೌಮ್ಯನಾಥ ಸ್ವಾಮೀಜಿ, ರಾಮನಗರ ಅನ್ನದಾನೇಶ್ವರ ಸ್ವಾಮೀಜಿ, ಪ್ರಾಂಶುಪಾಲ ಉಮೇಶ್​, ಪ್ರೌಢಶಾಲೆ ಮುಖ್ಯಸ್ಥ ವಿಜಯಸಿಂಹ ಇತರರು ಇದ್ದರು.

ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದರೆ ಸಾಧನೆ ಮಾಡಬಹುದು. ಮನೆ ಅಲ್ಲದೆ ಜಗತ್ತನ್ನು ಬೆಳಗಿಸುವ ಶಕ್ತಿ ವಿದ್ಯಾರ್ಥಿಗಳಲ್ಲಿ ಅಡಗಿದೆ. ರಾಜ್ಯ, ದೇಶ ಸೇರಿ ವಿದೇಶಗಳಲ್ಲಿ ಬಿಜಿಎಸ್​ನ 500 ಸಂಸ್ಥೆಗಳಿವೆ. ವಿದ್ಯಾರ್ಥಿಗಳು ಪಾಲಕರ ಭಾವನೆಗೆ ಪೂರಕವಾಗಿ ನಡೆಯಿರಿ. ಅವರ ಭಾವನೆಗೆ ಬೆಂಕಿ ಹಚ್ಚಬೇಡಿ.
 ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net