

ಮಾಗಡಿ
ರಾಷ್ಟ್ರಕವಿ ಕುವೆಂಪು ಹೇಳಿರುವಂತೆ ಸೌಹಾರ್ದತೆ ಮತ್ತು ಸಹಬಾಳ್ವೆ, ಬಹುತ್ವಕ್ಕೆ ಭಾರತ ದೇಶ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.
ಪಟ್ಟಣದ ರಾಮಮಂದಿರದಲ್ಲಿ ಪ್ರಸನ್ನ ಸೀತಾರಾಮ ಸೇವಾ ಸಂಘ ಹಾಗೂ ಕರ್ನಾಟಕ ಪ್ರತಿಭಾ ಕೇಂದ್ರದ ಸಹಯೋಗದಲ್ಲಿ ಸಾಹಿತಿ ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ ರಚಿಸಿರುವ ಶ್ರೀ ಭಾಗವತ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿ, ಭಾರತೀಯರು ನಾವೆಲ್ಲರೂ ಒಂದೇ ತಾಯಿ ಮಕ್ಕಳು. ಸರ್ವಜನಾಂಗದ ಶಾಂತಿಯ ತೋಟದಲ್ಲಿ ಸೌಹಾರ್ದತೆಯ ಭಾವನೆ ಇದ್ದಾಗ ದೇಶದಲ್ಲಿ ಐಕ್ಯತೆ ಮೂಡಲು ಸಾಧ್ಯವಿದೆ.
ಸಾಹಿತಿ, ವಿದ್ಯಾವಾಚಸ್ಪತಿ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಅವರ ’ಭಾಗವತ’ ಕೃತಿ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯಾಗಿದೆ ಎಂದು ಶ್ಲಾಘಿಸಿದರು.
ರಾಷ್ಟ್ರೀಯ ಸಹಸ್ರನಾಮ ಫೌಂಡೇಷನ್ ಸಂಸ್ಥಾಪಕ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಮಾತನಾಡಿ, ಮನುಷ್ಯರಾದವರು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರೆ ಭಗವಂತ ಮೆಚ್ಚುವಂತಿರಬೇಕು. ಕಲಿಯುಗದಲ್ಲಿ ಆಡಂಬರದ ಜೀವನಕ್ಕಾಗಿ ಕೇಳರಿಯದಷ್ಟು ಸಂಪತ್ತು ಗಳಿಸುತ್ತಾರೆ. ಮುಂದೆ ಅದೇ ಸಂಪತ್ತಿನಿಂದಲೇ ಅಪತ್ತಿಗೆ ಸಿಲುಕಿ ಬೀದಿಗೆ ಬರುತ್ತಾರೆ. ಹೀಗಾಗಿಯೇ ಅಲ್ಪಮತಿಗಳಾಗುತ್ತಿದ್ದಾರೆ. ಯಾರ ಮನೆಯಲ್ಲಿ ಭಾಗವತ ಗ್ರಂಥ ಇರುತ್ತದೆಯೋ ಅಂಥ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ಕಾಣಬಹುದು. ಇದೇ ಜೀವನದ ಸಂಪತ್ತು ಎಂದರು.
ಕರ್ನಾಟಕ ಪ್ರತಿಭಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಪಾನ್ಯಂ ನಟರಾಜ್ ಮಾತನಾಡಿ, ತಾಲೂಕಿನಲ್ಲಿ ಸಾಹಿತ್ಯ ಮತ್ತು ಧಾರ್ಮಿಕ ಸಭೆ ಸಮಾರಂಭ ನಡೆಸಿಕೊಂಡು ಬರಲಾಗುತ್ತಿದೆ. ಈ ಮೂಲಕ ಜನರಲ್ಲಿ ಸಾಹಿತ್ಯಾಭಿರುಚಿ ಬೆಳೆಸುವುದರ ಜತೆಗೆ ಸಾಮಾಜಿಕವಾಗಿಯೂ ಸಮಾಜದ ಮೇಲೆ ಬೆಳಕು ಚೆಲ್ಲುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಯೋಗ ವಿವಿಯ ಸೆಲ್ವರಾಜ್, ಡಾ.ಪ್ರಕಾಶ್ ಮಾತನಾಡಿದರು. ರಾಮಮಂದಿರದ ಕಾರ್ಯದರ್ಶಿ ಎಂ.ಎಲ್. ನರಸಿಂಹಸ್ವಾಮಿ, ಖಜಾಂಚಿ ಟಿ.ಎಸ್. ಲಕ್ಷ್ಮೀನಾರಾಯಣ, ಪದ್ಮಾಜಗನ್ನಾಥ್, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಮೀರಾ ಶಿವಕುಮಾರ್, ಜಯಲಕ್ಷ್ಮೀ, ಮಹಾಬಲೇಶ್ವರ ರಾವ್, ವಿಜಯಾ ದೀಕ್ಷಿತ್, ಪ್ರತಿಭಾ ಕೇಂದ್ರದ ಕಾರ್ಯದರ್ಶಿ ಎಂ.ಸಿ.ಗೋವಿಂದರಾಜು, ಭೂಷಿಣಿ ನಾಗರಾಜ್, ಆರ್ಯವೈಶ್ಯ ಮಂಡಳಿಯ ಮಾತನಾಡಿದರು. ಪ್ರತಿಭಾ ಕೇಂದ್ರದ ಉಪಾಧ್ಯಕ್ಷ ರಾಮಮಂದಿರ ಕಾರ್ಯದರ್ಶಿ ಮುನಿಯಪ್ಪ, ಶಿಕ್ಷಕ ಡಾ, ಮಾಡಿ ಎಂ.ಎಲ್. ನರಸಿಂಹಸ್ವಾಮಿ, ಖಜಾಂಚಿ ಮಾದಿಗೊಂಡನಹಳ್ಳಿ ಗುರುಪೀಠದ ಅಧ್ಯಕ್ಷ ಕರ್ನಾಟಕ ಪ್ರತಿಭಾ ಕೇಂದ್ರದ ಗಾಯತ್ರಿ ವಿಪ್ರ ವೃಂದದ ಅಧ್ಯಕ್ಷ ಪದ್ಮಾ ಮಹೇಶ್ ಇದ್ದರು.